ಹೈದರಾಬಾದ್ : ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಎನ್‍ಕೌಂಟರ್‍ನಲ್ಲಿ ಹತ್ಯೆಯಾದ ಆರೋಪಿಗಳ ಶವವನ್ನು ಡಿ.9ರವರೆಗೂ ಸಂರಕ್ಷಿಸಡಬೇಕೆಂದು ಹೈದರಾಬಾದ್ ಹೈಕೋರ್ಟ್ ತೆಲಂಗಾಣ ಸರ್ಕಾರಕ್ಕೆ ಆದೇಶ ಮಾಡಿದೆ. ಆರೋಪಿಗಳ ಮೃತದೇಹದ ಮರಣೋತ್ತರ ಪರೀಕ್ಷೆ ಅಂತ್ಯವಾಗಿದ್ದು, ಪೊಲೀಸರು ಆರೋಪಿಗಳನ್ನು ಎನ್‍ಕೌಂಟರ್ ಮಾಡಿರುವುದು ಕಾನೂನು ಬಾಹಿರ ಎಂದು ಹೇಳಲಾಗುತ್ತಿದ್ದು, ಈ ಪ್ರಕರಣದ ಕುರಿತು ನ್ಯಾಯಾಂಗ ಮಧ್ಯ ಪ್ರವೇಶಿಸುವ ಅಗತ್ಯವಿದೆ ಎಂದು ಕೋರ್ಟ್ ತಿಳಿಸಿದೆ. ಅಲ್ಲದೇ ಆರೋಪಿಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡುವ ವೀಡಿಯೋವನ್ನು ಪೆನ್‍ಡ್ರೈವ್ ಮೂಲಕ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಸಲ್ಲಿಸುವಂತೆ ಸೂಚಿಸಿದ್ದು, ಡಿ.9ರಂದು ರಾತ್ರಿ 8ಗಂಟೆಯವರೆಗು ಆರೋಪಿಗಳ ಮೃತದೇಹವನ್ನು ಸಂರಕ್ಷಿಸಿಡುವಂತೆ ಕೋರ್ಟ್ ಆದೇಶಿಸಿದೆ.