ಚಂದ್ರಯಾನ-3 ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ : ಇಸ್ರೋ ಅಧ್ಯಕ್ಷ ಕೆ.ಸಿವನ್ ಸ್ಪಷ್ಟನೆ…

156
firstsuddi

ಬೆಂಗಳೂರು : ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಭಾಹ್ಯಾಕೋಶ ಯೋಜನೆ ವಿಫಲವಾದ ಬಳಿಕ ಇಸ್ರೋ ಮತ್ತೊಂದು ಸಾಧನೆ ಮಾಡಲು ಮುಂದಾಗಿದ್ದು, ಚಂದ್ರಯಾನ-3 ಬಾಹ್ಯಾಕಾಶ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಸಿವನ್ ಅವರು ಅವರು ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚಂದ್ರಯಾನ-3 ಯೋಜನೆಗೆ ಒಪ್ಪಿಗೆ ಸೂಚಿಸಿದ್ದು, ಕೆಲಸ ಕಾರ್ಯ ಮುಂದುವರೆದಿದೆ. ಚಂದ್ರಯಾನ-3 ಯೋಜನೆಯಲ್ಲಿ ಲ್ಯಾಂಡರ್ ಮತ್ತು ರೋವರ್‍ಗಳು ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಇಳಿಯಲಿದೆ. ಅಲ್ಲದೇ ಮಾನ ಸಹಿತ ಗಗನಯಾನಕ್ಕಾಗಿ ನಾಲ್ವರು ವಿಜ್ಞಾನಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಚಂದ್ರಯಾನ-2 ವಿಫಲವಾಗಿದ್ದರ ಬಗ್ಗೆ ಮಾತನಾಡಿದ್ದು, ಚಂದ್ರಯಾನ-2 ಯೋಜನೆಯಲ್ಲಿ ನಾವು ಸಾಕಷ್ಟು ಸಾಧನೆಗಳನ್ನು ಮಾಡಿದ್ದೇವೆ. ಉಪಗ್ರಹಗಳನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಲು ಸಾಧ್ಯವಾಗದಿದ್ದರೂ ಕ್ಷೆ ಇನ್ನು ಚಂದ್ರ ಸುತ್ತ ಸುತ್ತುತ್ತಲೇ ಇದೆ. ಇನ್ನೂ 7 ವರ್ಷ ವಿಜ್ಞಾನದ ಅಂಕಿ ಅಂಶಗಳನ್ನು ತಯಾರಿಸುತ್ತಾ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.