ಮೂಡಿಗೆರೆ : ಕರ್ನಾಟಕ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುವ ಮತ್ತು ಭಯೋತ್ಪಾದಕ ಚಟುವಟಿಕೆ ನಡೆಸುವಂತೆ ಯುವಕರನ್ನು ತಯಾರು ಮಾಡಿ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಮುಖಂಡರುಗಳ ಹತ್ಯೆಗೆ ಸಂಚು ರೂಪಿಸುತ್ತಿರುವ ಮುಸ್ಲಿಂ ಸಂಗಟನೆಗಳಾದ ಕೆ.ಎಫ್.ಡಿ, ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳನ್ನು ರಾಜ್ಯಾದ್ಯಂತ ನಿಷೇಧಿಸುವಂತೆ ಭಜರಂಗದಳ ಮೂಡಿಗೆರೆ ವಿಭಾಗದ ಸಂಘಟನೆಯ ಸಂಯೋಜಕರು ಗೃಹ ಮಂತ್ರಿಗಳಿಗೆ ಪತ್ರ ಬರೆದು ತಹಶೀಲ್ದಾರರಿಗೆ ನೀಡಿದರು.
ಪತ್ರದಲ್ಲಿ ತಿಳಿಸಿರುವಂತೆ ಕೆ.ಎಫ್.ಡಿ, ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳು ರಾಜ್ಯದಲ್ಲಿ ಇರುವ ಹಿಂದೂ ಮುಖಂಡರುಗಳ ಹತ್ಯೆಗೆ ಸಂಚು ರೂಪಿಸಿದ್ದಾರೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಹಲವಾರು ಹಿಂದೂ ಮುಖಂಡರುಗಳನ್ನು ಹತ್ಯೆ ಮಾಡಿರುವದು ದಾಖಲಾಗಿದೆ. ಸಿ.ಎ.ಎ ಹಾಗೂ ಎನ್.ಆರ್.ಸಿ ವಿರೋಧಿಸುವ ನೆಪದಲ್ಲಿ ರಾಜ್ಯಾದ್ಯಂತ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿವೆ. ಇದೇ ಜ.26ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ರಾಜ್ಯ ಹಾಗೂ ದೇಶದಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿ ಸಿಕ್ಕಿಬಿದ್ದ ಎಲ್ಲಾ ಭಯೋತ್ಪಾದಕರು ಕೆ.ಎಫ್.ಡಿ, ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳ ಜೊತೆ ನೇರವದ ಸಂಬಂಧ ಹೊಂದಿರುವುದು ಸಾಬೀತಾಗಿದೆ. ಇದಲ್ಲದೆ ಜಡ್ಜ್ ಹಾಗೂ ಪೋಲೀಸರ ಹತ್ಯೆಗೆ ಸ್ಕೆಚ್ ಮಾಡುತ್ತಿರುವ ಎಲ್ಲಾ ಭಯೋತ್ಪಾದಕರು ಸಹ ಕೆ.ಎಫ್.ಡಿ, ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳ ಜೊತೆಗೆ ನಂಟು ಹೊಂದಿದ್ದಾರೆ. ಈ ಅಂಶಗಳನ್ನು ಆಧರಿಸಿ ಈ ಎಲ್ಲಾ ಸಂಘಟನೆಗಳನ್ನು ನಿಷೇಧಿಸುವುದರ ಜೊತೆಗೆ ಸಂಘಟನೆಗಳ ಮುಖಂಡರುಗಳನ್ನು ಬಂಧಿಸಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗಿದೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕೆ.ಎಫ್.ಡಿ, ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳನ್ನು ರಾಜ್ಯಾದ್ಯಂತ ನಿಷೇಧಿಸುವಂತೆ ತಾಲ್ಲೂಕು ಭಜರಂಗದಳ ರಾಜ್ಯ...










