ಚಿಕ್ಕಮಗಳೂರು : ತಾಲ್ಲೂಕು ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಂ.ಎನ್.ಅನುಪಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಕೆ.ಸಿ.ಮಂಜುನಾಥ್, ಮಹಾಪೋಷಕರಾಗಿ ಎಂ.ನಾರಾಯಣ, ಕಾರ್ಯಾಧ್ಯಕ್ಷರಾಗಿ ಎಸ್.ಕೆ.ಸುರೇಶ್, ಉಪಾಧ್ಯಕ್ಷರಾಗಿ ಹೆಚ್.ಆರ್.ಪುಷ್ಪಾವತಿ, ಬಿ.ಟಿ.ಗುರುಮೂರ್ತಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಂ.ವನಜಾಕ್ಷಿ, ಸಹಕಾರ್ಯದರ್ಶಿಯಾಗಿ ಎಸ್.ಮೀನಾಕ್ಷಿ, ನಾಗೇಶ್, ಖಜಾಂಚಿಯಾಗಿ ಡಿ.ಎಲ್.ಬಸವರಾಜ್, ಸಂಘಟನಾ ಕಾರ್ಯದರ್ಶಿಗಳಾಗಿ ಎಲ್.ಕೆ.ದಿನೇಶ್, ಡಿ.ದೀಪಿಕಾ, ಕೆ.ಬಿ.ಪಲ್ಲಾರಿ ಗೌಡ, ವಿ.ಸಿ.ತಿಮ್ಮಪ್ಪ, ಕೆ.ಕೆ.ಶ್ರೀನಿವಾಸ ಮೂರ್ತಿ, ಬಿ.ಹರೀಶ್ ಆಯ್ಕೆಯಾಗಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಟಿ.ಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಂ.ಎನ್.ಅನುಪಮ ಅವಿರೋಧ ಆಯ್ಕೆ…










