ಗೃಹಸಚಿವ ಅಮಿತ್ ಶಾ ಅವರು ಕಣ್ಣು ಮುಚ್ಚಿ ಕೂತಿರುವುದೇ ದೆಹಲಿ ಗಲಭೆಗೆ ಕಾರಣ : ಸಿದ್ದರಾಮಯ್ಯ ಆಕ್ರೋಶ…

211
firstsuddi

ಬೆಂಗಳೂರು : ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ತಾಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಳು ಜೀವಗಳನ್ನು ಬಲಿತೆಗೆದುಕೊಂಡ ದೆಹಲಿ ಗಲಭೆ ಅತ್ಯಂತ ಖೇದಕರವಾದರೂ ಅನಿರೀಕ್ಷಿತವೇನಲ್ಲ. ಬಿಜೆಪಿಯ ಸಚಿವರು, ಶಾಸಕರು ಬಹಿರಂಗವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾಗಲೂ “ಸರ್ವಶಕ್ತ” ಗೃಹಸಚಿವ ಅಮಿತ್ ಶಾ ಅವರು ಕಣ್ಣು ಮುಚ್ಚಿ ಕೂತಿರುವುದೇ ಈ ಗಲಭೆಗೆ ಕಾರಣ. ದೆಹಲಿಯಲ್ಲಿ ಹಿಂಸಾಚಾರಕ್ಕೆ ಬಹಿರಂಗವಾಗಿ ಪ್ರಚೋದನೆ ನೀಡಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ತಕ್ಷಣ ಬಂಧಿಸಬೇಕು. ಗಲಭೆಗ್ರಸ್ತ ಪ್ರದೇಶಕ್ಕೆ ಅವಶ್ಯಕ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಿ ಭೀತಿಗ್ರಸ್ತ ಜನರಲ್ಲಿ ವಿಶ್ವಾಸ ತುಂಬಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.