ಗುಪ್ತಾಂಗದಲ್ಲಿ ಸುಮಾರು 8.31 ಕೋಟಿ ಮೌಲ್ಯದ ಕೊಕೇನ್ ಸಾಗಿಸುತ್ತಿದ್ದ ವಿದೇಶಿ ಮಹಿಳೆಯ ಬಂಧನ…

226
firstsuddi

ಬೆಂಗಳೂರು : ತನ್ನ ಗುಪ್ತಾಂಗದಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ವಿದೇಶಿ ಮಹಿಳೆಯೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಗುಟೇಮಾಲಾ ದೇಶದ ಹರ್ರೆರಾ ವ್ಯಾಲೆಂಜುಲಾ ಡಿ ಲೋಪೆಜ್ ಸಿಲ್ವಿಯಾ ಗ್ವಾಡಾಲುಪೆ ಎಂದು ಗುರುತಿಸಲಾಗಿದ್ದು, ಈ ಮಹಿಳೆ ಸುಮಾರು 8.31 ಕೋಟಿ ಮೌಲ್ಯದ 150 ಕೊಕೋನ್ ಮಾತ್ರೆಗಳನ್ನು ಟ್ಯೂಬ್ ರೀತಿ ಮಾಡಿಕೊಂಡು ತನ್ನ ಗುಪ್ತಾಂಗದಲ್ಲಿ ಇಟ್ಟುಕೊಂಡಿದ್ದರು. ಇಥಿಯೋಪಿಯಾ ಏರ್ ಲೈನ್ಸ್ ET690 ಮೂಲಕ ಅಡಿಸ್ ಅಬಾಬದಿಂದ ಬೆಂಗಳೂರಿಗೆ ಬಂದ ಮಹಿಳೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೊಕೇನ್ ಪತ್ತೆಯಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಿ ಮಾದಕ ವಸ್ತುಗಳನ್ನು ಹೊರತೆಗೆಯಲಾಗಿದೆ. ಅಲ್ಲದೇ ಈ ಮಹಿಳೆ ಕಳೆದ ಎರಡು ದಿನದಿಂದ ಮಾದಕ ವಸ್ತುಗಳನ್ನು ತನ್ನ ಗುಪ್ತಾಂಗದಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದ್ದು, ಮಹಿಳೆಯೊಬ್ಬರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ತನ್ನ ದೇಹದೊಳಗೆ ಶೇಖರಣೆ ಮಾಡಿಕೊಂಡಿರುವುದನ್ನು ನೋಡಿ ಕಸ್ಟಮ್ಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದು, ಸದ್ಯ ಕಸ್ಟಮ್ಸ್ ಅಧಿಕಾರಿಗಳು NDPS ACT ಅಡಿಯಲ್ಲಿ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.