ಕೊರೊನಾ ಎಫೆಕ್ಟ್-ಏಪ್ರಿಲ್ 15ಕ್ಕೆ ಐಪಿಎಲ್ ಮುಂದೂಡಿಕೆ…

175
firstsuddi

ನವದೆಹಲಿ : ದೇಶದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವುದರಿಂದ ಐಪಿಎಲ್ ಪಂದ್ಯವನ್ನು ಮುಂದೂಡಿಕೆ ಮಾಡಿ ಭಾರತೀಯ ಕ್ರಿಕೆಟ್ ಮಂಡಳಿ ಆದೇಶ ಹೊರಡಿಸಿದೆ. 13ನೇ ಆವೃತ್ತಿಯ ಐಪಿಎಲ್ ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಆದರೆ ಇಡೀ ವಿಶ್ವದಾಧ್ಯಂತ ಮಾರಣಾಂತಿಕ ಕೊರೊನಾ ವೈರಸ್ ಹರಡಿ ಜನರನ್ನು ಭಯಭೀತರನ್ನಾಗಿಸಿದ್ದು, ಈ ಹಿನ್ನೆಲೆ, ಕೇಂದ್ರ ವಿದೇಶಾಂಗ ಇಲಾಖೆ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಪಂದ್ಯ ಆಡಿಸುವಂತೆ ಹೇಳಿತ್ತು. ಆದರೆ ಇದೀಗ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ ಹಾಗೂ ಐಪಿಎಲ್‍ನ ಉನ್ನತ ಆಡಳಿತ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ.