ಮೂಡಿಗೆರೆ : ನದಿಯಲ್ಲಿ ಮುಳುಗಿ ಯುವಕ ಸಾವು…

1521
firstsuddi

ಮೂಡಿಗೆರೆ : ಸ್ನೇಹಿತರೊಂದಿಗೆ ಈಜಲು ಹೋಗಿ ಯುವಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕೆಸವಳಲು ಕೂಡಿಗೆ ಬಳಿ ನಡೆದಿದೆ. ಹಂಡುಗುಳಿ ಗ್ರಾಮದ ನಿವಾಸಿ ಗವಿರಾಜ್(27) ಮೃತ ಯುವಕ ಎಂದು ಗುರುತಿಸಲಾಗಿದ್ದು, ಗವಿರಾಜ್ ತನ್ನ ಸ್ನೇಹಿತರೊಂದಿಗೆ ಹೇಮಾವತಿ ನದಿಗೆ ಈಜಲು ಹೋಗಿದ್ದು, ಈಜಲು ಬಾರದ ಗವಿರಾಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು, ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.