ಮೂಡಿಗೆರೆ : ಭಾರಿ ಗಾಳಿಮಳೆಗೆ ಹಾನಿ ಸಂಭವಿಸಿದ ಸ್ಥಳಗಳಿಗೆ ಗ್ರಾ.ಪಂ ಅಧಿಕಾರಿಗಳ ಭೇಟಿ…

217
firstsuddi

ಕೊಟ್ಟಿಗೆಹಾರ ; ಬಾರಿ ಗಾಳಿಮಳೆಗೆ ಬಣಕಲ್‍ನಲ್ಲಿ ಹಾನಿ ಸಂಭವಿಸಿದ ಸ್ಥಳಗಳಿಗೆ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ಪಿಡಿಓ ಕೃಷ್ಣಪ್ಪ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಅವರು ಮಾತನಾಡಿ ಬಣಕಲ್ ಚರ್ಚ್ ಹಿಂಭಾಗ ಅಬ್ಬಾಸ್ ಎಂಬುವವರ ಮನೆಯ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದೆ. ಕುವೆಂಪುನಗರದ ಮಣಿಯಮ್ಮ ಎಂಬುವವರ ಮನೆಯ ಮೇಲ್ವಾವಣಿ ಗಾಳಿಮಳೆಗೆ ನೆಲಕಂಡಿದೆ. ಕೆಲವೆಡೆ ವಿದ್ಯುತ್ ಕಂಬಗಳು ಹಾನಿಯಾಗಿದ್ದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ತಾಲ್ಲೂಕು ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮಳೆಹಾನಿಯ ವರದಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಿಡಿಓ ಕೃಷ್ಣಪ್ಪ, ಗ್ರಾ.ಪಂ ಸದಸ್ಯರಾದ ಇರ್ಪಾನ್, ದಿಲ್ದಾರ್ ಬೇಗಂ, ಸುರೇಶ್ ಕೆ.ಬಿ, ಸುಜಾತ, ರಾಮಚಂದ್ರ ಇದ್ದರು.