ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ಸಾವು…

191
firstsuddi

ಮೈಸೂರು : ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸಹಳ್ಳಿ ಗ್ರಾಮದ ಬಳಿ ನಡೆದಿದೆ. ಟಿ. ನರಸೀಪುರ ತಾಲ್ಲೂಕಿನ ಹೊಸಪುರ ಗ್ರಾಮದ ನಿವಾಸಿಗಳಾದ ಮಹದೇವ ನಾಯಕ, ಮಹದೇವಸ್ವಾಮಿ ಹಾಗೂ ತೇಜು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಮೃತರು ಲಾರಿಯಲ್ಲಿ ಜಾಳದ ಕಡ್ಡಿಗಳನ್ನು ತುಂಬಿಸಿಕೊಂಡು ಬರುತ್ತಿದ್ದ ವೇಳೆ ಅಡ್ಡಲಾಗಿದ್ದ ವಿದ್ಯತ್ ತಂತಿಯನ್ನು ಸರಿಸಲು ಮುಂದಾಗಿದ್ದು, ಈ ವೇಳೆ ಮೂವರಿಗೂ ವಿದ್ಯತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದು, ವರುಣ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.