ಕರ್ನಾಟಕಕ್ಕೆ ಮಹಾ ನಂಜು-ಇಂದು ಒಂದೇ ದಿನ 515 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ-ಸೋಂಕಿತರ ಸಂಖ್ಯೆ 4,835ಕ್ಕೆ ಏರಿಕೆ…

221
firstsuddi

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 515 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4,835ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್‍ನಲ್ಲಿ ಇಂದು ಉಡುಪಿ-204, ಯಾದಗಿರಿ-74, ವಿಜಯಪುರ-53, ಕಲಬುರಗಿ-42, ಬೀದರ್-39, ಬೆಳಗಾವಿ36, ಮಂಡ್ಯ-13, ಬೆಂಗಳೂರು ಗ್ರಾಮಾಂತರ-12, ಬೆಂಗಳೂರು ನಗರ-10, ದಕ್ಷಿಣ ಕನ್ನಡ-8, ಉತ್ತರ ಕನ್ನಡ-7, ಹಾಸನ-3, ಚಿಕ್ಕಬಳ್ಳಾಪುರ-3, ಧಾರವಾಡ-3, ರಾಮನಗರ-2, ಹಾವೇರಿ-2, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ ಹಾಗೂ ಕೋಲಾರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಇಂದು 515 ಮಂದಿ ಸೋಂಕಿತರ ಪೈಕಿ 483 ಮಂದಿ ಹೊರರಾಜ್ಯದಿಂದ ಬಂದಿದ್ದು, ಅವರಲ್ಲಿ 473 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.