ಆಟವಾಡುತ್ತಿದ್ದ ವೇಳೆ ರಿಮೋಟ್ ಸೆಲ್ ನುಂಗಿ ಒಂದೂವರೆ ವರ್ಷದ ಮಗು ಸಾವು…

190
firstsuddi

ಮೈಸೂರು : ರಿಮೋಟ್ ಸೆಲ್ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ನಡೆದಿದೆ. ಹೇಮಂತ್ ಸ್ಕಂದಮಣಿ ರಾಜು ಮೃತ ಮಗು ಎಂದು ಗುರುತಿಸಲಾಗಿದ್ದು, ಮಗು ಆಗಸ್ಟ್ 31ರಂದು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ರಿಮೋಟ್‍ಗೆ ಬಳಸುವ ಸೆಲ್ ನುಂಗಿತ್ತು. ಬಳಿಕ ಕೂಡಲೇ ಪೋಷಕರು ಮಗುವನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಈ ಕುರಿತು ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.