ಐಪಿಎಲ್ 2020 : ಸಿಎಸ್‍ಕೆ ತಂಡದ ವೇಗಿ ದೀಪಕ್ ಚಹರ್ ಅವರಿಗೆ ಕೊರೊನಾ ನೆಗೆಟಿವ್-ಶೀಘ್ರವೇ ತಂಡಕ್ಕೆ ಸೇರ್ಪಡೆ…

166
firstsuddi

ಅಬುಧಾಬಿ : ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಅವರು ಕೊರೊನಾದಿಂದ ಗುಣಮುಖರಾಗಿದ್ದು, ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್‍ಗೆ ಮರಳಿದ್ದಾರೆ. ದೀಪಕ್ ಚಹರ್ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ ತಂಡದ 12 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ಬಳಿಕ ಇವರೆಲ್ಲರೂ ತಂಡದಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಿಎಸ್‍ಕೆ ತಂಡದ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದ್ದ ಕಾರಣ ತಂಡದ ಆಟಗಾರರಿಗೆ ಕ್ವಾರಂಟೈನ್ ಅವಧಿಯನ್ನೂ ಹೆಚ್ಚಿಸಲಾಗಿತ್ತು. ಸದ್ಯ ದೀಪಕ್ ಚಹರ್ ಅವರಿಗೆ ಕೊರೊನಾ ನೆಗೆಟಿವ್ ಬಂದಿದ್ದು, ಇನ್ನು 4 ದಿನಗಳ ಬಳಿಕ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.