ಶ್ರೀನಗರ : ಭಾರತೀಯ ಯೋಧರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಬಂಧಿತ ಉಗ್ರರು ಜಮ್ಮು ಕಾಶ್ಮೀರಾದ ಕುಪ್ವಾರ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ತಿಳಿದು ಕಾರ್ಯಾಚರಣೆಗೆ ಇಳಿದ ಯೋಧರು ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ಉಗ್ರರಿಂದ 2 ಗ್ರೆನೇಡ್‍ಗಳು, ಒಂದು ಎಕೆ-47 ರೈಫಲ್, ಶಸ್ತ್ರಾಸ್ತ್ರಗಳು ಹಾಗೂ 7 ಲಕ್ಷ ರೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಕಾಶ್ಮೀರಾ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.










