ಉಡುಪಿ: ತಾಯಿ ಓದಲು ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾಜ್ರಳ್ಳಿ ಜನತಾ ಕಾಲೋನಿ ಶಿರಿಯಾರದಲ್ಲಿ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಕಾಜ್ರಳ್ಳಿ ಜನತಾ ಕಾಲೊನಿ ಶಿರಿಯಾರ ಗ್ರಾಮ ಬ್ರಹ್ಮಾವರ ತಾಲೂಕು ಬಳಿಯ ಕವಿತಾ ಅವರ ಮಗ ತನುಷ್(12) ಎಂದು ಗುರುತಿಸಲಾಗಿದೆ.
ತನುಷ್ 7 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದ್ದು, ಮೃತ ಬಾಲಕ ಕಲಿಕೆಯಲ್ಲಿ ಸ್ವಲ್ಪ ಹಿಂದಿದ್ದ. ಅಲ್ಲದೇ ಹೇಳಿದ ಮಾತನ್ನು ಕೇಳದೇ ಹಠಮಾರಿ ತನದಿಂದ ವರ್ತಿಸುತ್ತಿದ್ದ. ಈಗ ಆನ್ ಲೈನ್ ಕ್ಲಾಸ್ ನಡೆಯುತ್ತಿರುವುದರಿಂದ ಎಂದಿನಂತೆ ತಾಯಿ ಒಳ್ಳೆಯ ರೀತಿಯಲ್ಲಿ ಓದು ಎಂದು ಬುದ್ದಿ ಮಾತನ್ನು ಹೇಳಿ ತನ್ನ ಕೆಲಸಕ್ಕೆ ಹೋಗಿದ್ದರು. ಆದರೆ ತನುಷನು ಹಠಮಾರಿತನದಿಂದ ಹಾಗೂ ವಿದ್ಯೆ ಸರಿಯಾಗಿ ತಲೆಗೆ ಹೋಗದ ಕಾರಣ ಬೇಸರಗೊಂಡು ಅಥವಾ ಇನ್ನಾವುದೋ ಕಾರಣದಿಂದ ಹಳೆಯ ಮನೆಯ ಕೊಠಡಿಯಲ್ಲಿದ್ದ ಜೋಕಾಲಿ ಸೀರೆಯನ್ನು ಪಕ್ಕಾಸಿಗೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










