ಕೊಟ್ಟಿಗೆಹಾರ : ನಿಡುವಾಳೆ ಗ್ರಾಮಸ್ಥರು ಕಾಗಿನಕೊಂಡ ಸುಕ್ಲುಮಕ್ಕಿ ರಸ್ತೆ ಇಬ್ಬದಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು.
ರಸ್ತೆ ಇಬ್ಬದಿ ಬೆಳೆದಿದ್ದ ಗಿಡಗಂಟಿಗಳನ್ನು ಕಳೆ ಕೊಚ್ಚುವ ಯಂತ್ರದ ಮೂಲಕ ತೆಗೆದು ಕಳೆ ನಾಶಕ ಸಿಂಪಡಿಸಲಾಯಿತು. ಪ್ಲಾಸ್ಟಿಕ್ ಕಳೆ ಸಸ್ಯಗಳನ್ನು ಸಂಗ್ರಹಿಸಿ ಸುಟ್ಟು ಹಾಕಲಾಯಿತು. ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ನವೀನ್ ಹಾವಳಿ, ರಸ್ತೆ ಇಬ್ಬದಿ ಗಿಡಗಂಟಿಗಳು ಬೆಳೆದು ಪಾದಚಾರಿಗಳಿಗೆ ಸಂಚರಿಸಲು, ವಾಹನ ಸವಾರರಿಗೆ ಪ್ರಯಾಣಿಸಲು ತೊಂದರೆಯಾಗಿತ್ತು. ಆದ್ದರಿಂದ ಗ್ರಾಮಸ್ಥರು ಸೇರಿ ಗಿಡಗಂಟಿಗಳನ್ನು ತೆರವು ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಲಕ್ಷ್ಮಣ್ ಪೂಜಾರಿ, ವಿವೇಕ್ ಪೂಜಾರಿ, ಸುಂದರ್ ಪೂಜಾರಿ ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಕೊಟ್ಟಿಗೆಹಾರ : ರಸ್ತೆ ಇಬ್ಬದಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದ ನಿಡುವಾಳೆ ಗ್ರಾಮಸ್ಥರು…










