ಸಚಿವರ ಕಾರಿಗೆ ಮುತ್ತಿಗೆ… ಹೆಂಗ್ ಬಂದ್ರು ಅಂಗೇ ಹೋದ್ರು ಖಾದರ್ ಸಾಹೇಬ್ರು…!

592

ಮಂಗಳೂರು : ಆಹಾರ ಸಚಿವ ಯು.ಟಿ.ಖಾದರ್ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ದುಷ್ಕರ್ಮಿಗಳಿಂದ ಸಾವಿಗೀಡಾದ ಜುಬೇರ್ ಮನೆಗೆ ಭೇಟಿ ನೀಡಲು ಬಂದಾಗ ಸ್ಥಳೀಯರು ಅವರನ್ನ ತಡೆದು ಮುಂದೆ ಹೋಗದಂತೆ ಅವರ ಕಾರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಸ್ಥಳಿಯರ ಆಕ್ರೋಶ ಕಂಡ ಸಚಿವ ಖಾದರ್ ಇನ್ನೊಂದು ವಾಹನದಲ್ಲಿ ಅಲ್ಲಿಂದ ನಿರ್ಗಮಿಸಿದ್ದಾರೆ. ಅವರ ವಾಹನದ ಮೇಲೆ ಆಕ್ರೋಶಭರಿತ ಸ್ಥಳಿಯರಿಂದ ಕಲ್ಲುತೂರಾಟ ನಡೆದಿದೆ ಎಂದು ಹೇಳಲಾಗ್ತಿದೆ. ಮೃತ ಜುಬೇರ್ ಮನೆಗೆ ಹೋಗದಂತೆ ಸ್ಥಳಿಯರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೊಲೆಗೆ ನೀವು ಮತ್ತು ನಿಮ್ಮ ಪಕ್ಷದ ಸ್ಥಳೀಯ ನಾಯಕರೇ ಕಾರಣ. ಪೊಲೀಸರ ಮೇಲೆ ಗೂಂಡಾಗಳು ಹಲ್ಲೆ ಮಾಡಿದಾಗ, ಅವರ ವಿರುದ್ಧ ಕ್ರಮ ಕೈಗೊಳ್ಳದೆ ಸಂಧಾನ ಮಾಡಿದರ ಪರಿಣಾಮ ಜುಬೇರ್ ಕೊಲೆಯಾಗಿದೆ. ಈಗ ಬಂದು ನೀವು ಸಮಾಧಾನ ಹೇಳೋದು ಬೇಡವೆಂದಾಗ ಸಚಿವರೇ ಅಲ್ಲಿಂದ ವಾಪಸ್ ಹೋದರು.

LEAVE A REPLY

Please enter your comment!
Please enter your name here