ಕ್ಲಾಸ್ ಟೀಚರ್ ಗೆ ಹೋಂ ವರ್ಕ್ ತೋರಿಸಲು 35 ಕಿ.ಮೀ ಪ್ರಯಾಣಿಸಿದ 2ನೇ ತರಗತಿ ಬಾಲಕ…

241
firstsuddi

ಧಾರವಾಡ : ಕ್ಲಾಸ್ ಟೀಚರ್ ಗೆ ಹೋಂ ವರ್ಕ್ ತೋರಿಸಲು 2ನೇ ತರಗತಿ ಬಾಲಕ 35 ಕಿ.ಮೀ ಪ್ರಯಾಣಿಸಿರುವ ಘಟನೆ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಯರಿಬೂದಿಹಾಳದಲ್ಲಿ ನಡೆದಿದೆ. ಪವನ್ ಕಂಠೀ ಹೋಂ ವರ್ಕ್ ತೋರಿಸಲು ತೆರಳಿದ ಬಾಲಕ. ಹುಬ್ಬಳ್ಳಿಯ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಪವನ್ ಕೊರೊನಾ ಭೀತಿಯಿಂದ ಶಾಲೆಗಳು ಬಂದ್ ಆಗಿರುವ ಹಿನ್ನೆಲೆ ತನ್ನ ತಂದೆ ತಾಯಿಯೊಂದಿಗೆ ವಾಸಿಸುತ್ತಿದ್ದನು. ಬಾಲಕ ಪವನ್ ಕಂಠಿ ತಂದೆ-ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇವರಿಗೆ ಆನ್‍ಲೈನ್ ಶಿಕ್ಷಣದ ಸೌಲಭ್ಯ ಇಲ್ಲದ ಕಾರಣ ಈ ಹಿಂದೆ ತನ್ನ ತಾಯಿಯೊಂದಿಗೆ ಶಾಲೆಗೆ ಬಂದು ತನ್ನ ಕ್ಲಾಸ್ ಟೀಚರ್ ಅನುಸೂಯ ಸಜ್ಜನ್ ಅವರನ್ನು ಭೇಟಿಯಾದ ಪವನ್ ಗೆ ಒಂದು ತಿಂಗಳಿಗೆ ಆಗುವಷ್ಟು ಹೋಂ ವರ್ಕ್ ನೀಡಿ ಕಳುಹಿಸಿದ್ದರು. ಹೋಂ ವರ್ಕ್ ಸಂಪೂರ್ಣ ಮಾಡಿ ಮುಗಿಸಿದ ಬಾಲಕ ಟೀಚರ್ ಗೆ ತೋರಿಸಬೇಕೆಂಬ ಹಠದಿಂದ ತನ್ನ ತಾಯಿಯೊಂದಿಗೆ 35 ಕಿ.ಮೀ ಪ್ರಯಾಣಿಸಿ ಬಂದಿದ್ದು, ಬಾಲಕನ ವಿದ್ಯಾಸಕ್ತಿಗೆ ಶಿಕ್ಷಕಿ ಮೆಚ್ಚುಗೆ ವ್ಯಕ್ತಪಡಿಸಿ ನೋಟ್‍ಬುಕ್ ಹಾಗೂ ಪಠ್ಯ ಪುಸ್ತಕವನ್ನು ನೀಡಿ ಕಳುಹಿಸಿಕೊಟ್ಟರು.