ಮಂಗಳೂರು : ಉಗ್ರ ಸಂಘಟನೆಯ ಪರ ಗೋಡೆ ಬರಹ ಬರೆದಿದ್ದ ಓರ್ವ ಆರೋಪಿಯ ಬಂಧನ…

157
firstsuddi

ಮಂಗಳೂರು : ಅಪಾರ್ಟ್‍ಮೆಂಟ್ ಕಾಂಪೌಂಡ್ ಮೇಲೆ ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತೀರ್ಥಹಳ್ಳಿಯ ನಿವಾಸಿ ನಜೀರ್ ಮೊಹಮ್ಮದ್ (26) ಎಂದು ಗುರುತಿಸಲಾಗಿದೆ. ಆನ್‍ಲೈನ್ ಫುಡ್ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದ ನಜೀರ್ ನ ಮೊಬೈಲ್ ದಾಖಲೆಗಳನ್ನು ಆಧರಿಸಿ ನಜೀರ್‍ನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಈ ಮೂಲಗಳಿಂದ ತಿಳಿದು ಬಂದಿದೆ.