ಇಸ್ಲಾಮಾಬಾದ್ : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೊರೊನಾ ದೃಢಪಟ್ಟಿದೆ. ಎರಡು ದಿನಗಳಿಂದ ಹೋಮ್ ಕ್ವಾರಂಟೈನ್ ನಲ್ಲಿ ಇದ್ದಾರೆ ಎಂದು ಪ್ರಧಾನಮಂತ್ರಿ ಆರೋಗ್ಯ ಸೇವೆಯ ವಿಶೇಷ ಸಹಾಯಕ ಫೈಸಲ್ ಸುಲ್ತಾನ್ ಅವರು ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಇಮ್ರಾನ್ ಖಾನ್ ಅವರು ಚೀನಾದ ಕೊರೊನಾ ಲಸಿಕೆ ಸಿನೋಫಾರ್ಮ್‍ನ್ನು ಪಡೆದಿದ್ದರು. ಆದರೆ, ಇದೀಗ ಕೊರೊನಾ ದೃಢವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಇಮ್ರಾನ್ ಖಾನ್ ಅವರು ವೈರಸ್ ಕುರಿತು ಯಾರೂ ಕೂಡ ನಿರ್ಲಕ್ಷ್ಯವಹಿಸದೇ ಕಟ್ಟುನಿಟ್ಟಾಗಿ ನಿಯಮ ಅನುಸರಿಸುವಂತೆ ರಾಷ್ಟ್ರವನ್ನುದ್ದೇಶಿಸಿ ಮನವಿ ಮಾಡಿದ್ದಾರೆ.










