ಉಡುಪಿ : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಗುಂಪುಗೂಡಿ ಕ್ರಿಕೆಟ್ ಆಡಿದವರ ವಿರುದ್ದ ಕೇಸ್ : ಡಿಸಿ ಜಿ.ಜಗದೀಶ್ ಎಚ್ಚರಿಕೆ…

155
firstsuddi

ಉಡುಪಿ : ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಗುಂಪುಗೂಡಿ ಕ್ರಿಕೆಟ್ ಆಡಿದವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ವೀಡಿಯೋ ಸಂದೇಶದ ಮೂಲಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ಸಂಕಷ್ಟದ ಕಾಲದಲ್ಲೂ ಸಹ ಗ್ರೌಂಡ್ ನಲ್ಲಿ ಕೆಲವರು ಕ್ರಿಕೆಟ್ ಆಡುತ್ತಿದ್ದಾರೆ. ಹೀಗೆ ಗುಂಪು ಗೂಡಿ ಕ್ರಿಕೆಟ್ ಆಡುವುದನ್ನು ಜಿಲ್ಲೆಯಾದ್ಯಂತ ಗಮನಿಸಿದ್ದೇನೆ.

ಈಗಾಗಲೇ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮಾತನಾಡಿದ್ದು,ಈ ರೀತಿ ಗುಂಪಿನಲ್ಲಿ ಕ್ರಿಕೆಟ್ ಆಡುವುದು ಕಂಡು ಬಂದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ದಯವಿಟ್ಟು ಇಂತಹ ಕ್ರಿಕೆಟ್ ಆಡುವ ಮೂಲಕ ಕಾನೂನು ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಡಿಸಿ ಜಗದೀಶ್ ಎಚ್ಚರಿಸಿದ್ದಾರೆ.