ಪರೀಕ್ಷೆ ಇಲ್ಲದೇ ದ್ವಿತೀಯ ಪಿಯುಸಿ ರಿಪಿಟರ್ಸ್ ಪಾಸ್…

87
firstsuddi

ಬೆಂಗಳೂರು : ದ್ವಿತೀಯ ಪಿಯುಸಿ ರಿಪಿಟರ್ಸ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆಯೇ ಪಾಸ್ ಮಾಡುವ ತೀರ್ಮಾನಕ್ಕೆ ಸರ್ಕಾರ ಮುಂದಾಗಿದೆ.

ಇಂದು ನಡೆದ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪ್ರಸಕ್ತ ಸಾಲಿನ ಪಿಯು ವಿದ್ಯಾರ್ಥಿಗಳ ಜೊತೆಗೆ 76 ಸಾವಿರ ರಿಪಿಟರ್ಸ್ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಶೇ 35ರಷ್ಟು ಅಂಕಗಳನ್ನು ನೀಡಿ ಉತ್ತೀರ್ಣಗೊಳಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳನ್ನು ಅವರ ಎಸ್ ಎಸ್ ಎಲ್ ಸಿ ಅಂಕಗಳನ್ನು ಶೇ. 45 ರಂತೆ ಪ್ರಥಮ ಪಿಯು ನಲ್ಲಿ ಗಳಿಸಿದ್ದ ಅಂಕಗಳನ್ನು ಶೇ. 45ರಂತೆ ಹಾಗೂ ದ್ವಿತೀಯ ಪಿಯುಸಿ ಇಂಟರ್ನಲ್ ಅಸೆಸ್ಮೆಂಟ್ ಗೆ ಶೇ. 10ರಂತೆ ಅಂಕಗಳನ್ನು ಪರಿಗಣಿಸಿ ಪಾಸ್ ಮಾಡಲಾಗುವುದು. ಜುಲೈ 31ರ ಒಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೈಕೋರ್ಟ್ ಗೆ ಸರ್ಕಾರ ತಿಳಿಸಿದೆ.