ಯುವತಿಯ ಅಂಗಾಂಗ ಮುಟ್ಟಿ, ಹಲ್ಲೆ ನಡೆಸಿದ ಕಾಮುಕ…

78
firstsuddi

ಬೆಂಗಳೂರು : ಕಾಮುಕನೋರ್ವ ಯುವತಿಯ ಅಂಗಾಂಗ ಮುಟ್ಟಿ , ಹಲ್ಲೆ ನಡೆಸಿರುವ ಘಟನೆ ನಗರದ ಲ್ಯಾಂಗ್ ಪೋರ್ಡ್ ರಸ್ತೆಯಲ್ಲಿ ನಡೆದಿದೆ.

ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ಬ್ಯಾಂಕಿನಲ್ಲಿ ಬಿಪಿಓ ಆಗಿ ಕಾರ್ಯನಿರ್ವಹಿಸುತ್ತಿರುವ ಯುವತಿ ಭಾನುವಾರ ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಲ್ಯಾಂಡ್ ಪೋರ್ಡ್ ರಸ್ತೆಯ ಕಡೆ ತೆರಳುತ್ತಿದ್ದ ವೇಳೆಯಲ್ಲಿ ಅಕ್ಕಿತಿಮ್ಮನಹಳ್ಳಿಯ ಗಣೇಶ ಮಂದಿರದ ಬಳಿ ಅಪರಿಚಿತ ವ್ಯಕ್ತಿಯೊರ್ವ ಹಿಂಭಾಗದಿಂದ ತಬ್ಬಿಕೊಂಡು ಹಲ್ಲೆ ನಡೆಸಿದ್ದಾನೆ.

ಸ್ಥಳೀಯರು ನನ್ನ ನೆರವಿಗೆ ಧಾವಿಸಿ ಸಹಾಯ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಐಪಿಸಿ ಸೆಕ್ಷನ್ 354ಅಡಿ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.