ಬೆಂಗಳೂರು : ಮಗಳಿಗೆ ನೇಣು ಬಿಗಿದು ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ನಡೆದಿದೆ.
ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ವರಲಕ್ಷ್ಮೀ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ವೇಳೆ ಹಿರಿಯ ಮಗಳೂ ದಿವ್ಯಾಗೂ ನೇಣು ಬಿಗಿದಿದ್ದಾರೆ. ಅದನ್ನು ಕಂಡು ಕಿರಿಯ ಮಗಳು ಮನೆ ಹೊರಗೆ ಬಂದು ಕಿರುಚಿಕೊಂಡಿದ್ದಾಳೆ. ತಕ್ಷಣ ಸ್ಥಳೀಯರು ತಾಯಿ ಮತ್ತು ಮಗಳು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದಿವ್ಯಾ(12) ಕೊನೆಯುಸಿರೆಳೆದಿದ್ದು, ವರಲಕ್ಷ್ಮೀ (38) ಸ್ಥಿತಿ ಗಂಭೀರವಾಗಿದೆ.
ವರಲಕ್ಷ್ಮಿ ಪತಿ ತಿಮ್ಮರಾಜು ಕಳೆದ ಮೂರು ತಿಂಗಳ ಹಿಂದೆ ಕೋವಿಡ್ ಗೆ ಬಲಿಯಾಗಿದ್ದರು. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










