ಯುವಕ, ಯುವತಿಯ ಖಾಸಗಿ ವೀಡಿಯೋ ರೆಕಾರ್ಡ್ – ಬೆದರಿಸಿ ಹಣಕ್ಕೆ ಬೇಡಿಕೆ…

85
firstsuddi

ಬೆಂಗಳೂರು : ಮೈಸೂರಲ್ಲಿ ಏಕಾಂತ ಕಳೆಯಲು ಹೋದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅದೇ ರೀತಿ ಈಗ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ಆದರೆ ಇಲ್ಲಿ ಹೀನ ಕೃತ್ಯ ನಡೆದಿಲ್ಲ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಂದೇನಹಳ್ಳಿ ಗ್ರಾಮದ ಸಯ್ಯದ್ ಆಸಿಫ್ ಫಾಷಾ, ನವಾಜ್ ಪಾಷ, ಲಿಯಾಖತ್ ಪಾಷಾ, ಸಲ್ಮಾನ್ ಖಾನ್, ರೂಹಿದ್ ಬಂಧಿತ ಆರೋಪಿಗಳು.

ಏನಿದು ಪ್ರಕರಣ?
ಸೆ.25ರಂದು ಬೆಳಗ್ಗೆ 11 ಗಂಟೆಗೆ ಯುವತಿಯೊಬ್ಬಳು ಸಂಬಂಧಿ ಯುವಕನ ಜೊತೆ ಖಾಸಗಿ ಲೇಔಟ್ ಗೆ ತೆರಳಿದ್ದರು. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ಖಾಸಗಿ ಲೇಔಟ್ ಗೆ ಈ ಜೋಡಿ ಹೋಗುತ್ತಿತ್ತು. ಈ ವೇಳೆ ಇವರಿಬ್ಬರು ಕಾರಿನಲ್ಲಿ ಕೂತು ಸ್ನ್ಯಾಕ್ಸ್ ಮತ್ತು ತಂಪು ಪಾನೀಯ ಸೇವಿಸ್ತಿದ್ದರು. ಆಗ ಬೆಳಗ್ಗೆ 11:30ಕ್ಕೆ ಎಂಟ್ರಿ ಕೊಟ್ಟ ದುರಳರ ಗುಂಪೊಂದು ಈ ಯುವತಿ ಯುವಕನನ್ನು ನೋಡಿ ಅವರ ವೀಡಿಯೋವನ್ನು ಮಾಡಿದ್ದು, ಕಾರಿನಲ್ಲೇ ಕೂರುವಂತೆ ಹೆದರಿಸಿದ್ದಾರೆ. ಬಳಿಕ ಇಬ್ಬರ ಖಾಸಗಿ ಕ್ಷಣಗಳನ್ನು ಮೊಬೈಲ್ ನಲ್ಲಿ ಈ ಗ್ಯಾಂಗ್ ಹಿಂದಿನಿಂದ ಚಿತ್ರೀಕರಿಸಿದ್ದು, ಅಲ್ಲದೆ ಯುವತಿಯ ಕೈ ಹಿಡಿದು ಎಳೆದಾಡಿದ್ದಾರೆ. ಐದು ಲಕ್ಷ ಹಣ ಕೊಡಬೇಕು, ಇಲ್ಲವಾದಲ್ಲಿ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲಿ ಈ ಗ್ಯಾಂಗ್ ದೂರದಲ್ಲಿ ಜನ ಬರುತ್ತಿರುವುದು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಆಘಾತದಿಂದ ಚೇತರಿಸಿಕೊಂಡ ಯುವತಿ ಘಟನೆಯ ಬಗ್ಗೆ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 354 (A) , 354 (D), 354(C) , 354(B), 504, 149, 384ಅಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಯುವತಿ ಆರೋಪಿಗಳ ಮುಖ ನೋಡಿದ್ರೆ ಗುರುತು ಪತ್ತೆ ಹಚ್ಚೋದಾಗಿ ಹೇಳಿದ್ದರು. ಈ ಸಂಬಂಧ ಯುವತಿಯ ದೂರು ಬೆನ್ನಲ್ಲೇ ಪೊಲೀಸರು ಶೋಧ ಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಮೊಬೈಲ್ ನಲ್ಲಿದ್ದ ಖಾಸಗಿ ವೀಡಿಯೋವನ್ನು ಪೊಲೀಸರು ಡಿಲೀಟ್ ಮಾಡಿದ್ದಾರೆ. ಆರೋಪಿಗಳ ಪೆರೇಡ್‍ನ್ನು ಯುವತಿಯ ಮುಂದೆ ಮಾಡಿಸಿದಾಗ ಅವರ ಗುರುತನ್ನು ಹಿಡಿದ್ದಾರೆ. ಹಂದೇನ ಹಳ್ಳಿಯವರಾದ ಇವರು ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ದರು. ಯುವತಿಯ ಹಣೆಬರಹ ಚೆನ್ನಾಗಿತ್ತು. ದುರಂತ ಏನೂ ಆಗಿಲ್ಲ. ಸದ್ಯ ಎಲ್ಲ ಆರೋಪಿಗಳನ್ನು ಪೊಲೀಸರು ಜೈಲಿಗೆ ಹಾಕಿದ್ದಾರೆ.