ಚಾಮುಂಡೇಶ್ವರಿ ದೇವಾಲಯದ ಹುಂಡಿಯಲ್ಲಿ 1.77 ಕೋಟಿ ಸಂಗ್ರಹ…

82
firstsuddi

ಮೈಸೂರು : ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಸೆಪ್ಟೆಂಬರ್ 23ರಿಂದ ನವೆಂಬರ್ 10ರವರೆಗೆ 1.77 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಹುಂಡಿ ಎಣಿಕೆ ಸಂಬಂಧ ಚಾಮುಂಡೇಶ್ವರಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2000 ರೂ. ಮುಖಬೆಲೆ 223 ನೋಟುಗಳು, 500 ರೂ.ಬೆಲೆಯ 14372 ನೋಟುಗಳು, 200ರೂ.ಬೆಲೆಯ 4738 ನೋಟುಗಳು, 100 ರೂ.ಮುಖಬೆಲೆಯ 57003 ನೋಟುಗಳು, 50 ರೂ.ಮುಖಬೆಲೆಯ 30,380 ನೋಟಗಳು, 20 ರೂ.ಮುಖಬೆಲೆಯ 36,012 ನೋಟುಗಳು, 10 ರೂ.ಮುಖಬೆಲೆಯ 96,505 ನೋಟುಗಳಿಂದ 1,74,85,623 ಕೋಟಿ ರೂ. ಹಾಗೂ 10,5,2,1 ರೂ.ನಾಣ್ಯಗಳಿಂದ 3,09,862 ಲಕ್ಷ ರೂಪಾಯಿ ಸೇರಿದಂತೆ ಒಟ್ಟಾರೆಯಾಗಿ 1,77,95,485 ಕೋಟಿ ರೂಪಾಯಿ ಸಂಗ್ರಹವಾಗಿದೆ.