ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ದಂಪತಿ ದುರ್ಮರಣ…

71
firstsuddi

ದೊಡ್ಡಬಳ್ಳಾಪುರ(ಬೆ. ಗ್ರಾಮಾಂತರ) : ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಪಘಾತದಲ್ಲಿ ದೊಡ್ಡಬೆಳವಂಗಲ ನಿವಾಸಿಗಳಾದ ಶ್ಯಾಮನಾಯಕ್(65) ಮತ್ತು ಶಾರದಮ್ಮ(58) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಬಸ್ ಪೇಟೆಗೆ ಗಾರೆ ಕೆಲಸಕ್ಕೆಂದು ಬೈಕ್ ನಲ್ಲಿ ಹೊರಟಿದ್ದರು.ಈ ವೇಳೆ ಕತ್ತಿಹೊಸಹಳ್ಳಿ ಗ್ರಾಮದ ಬಳಿ ದಂಪತಿ ಬೈಕ್ ಮೇಲೆ ಲಾರಿ ಹರಿದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.