ಮಂಡ್ಯ : ಯುವಕನೊಬ್ಬ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಬೆತ್ತಲಾಗಿ ಹುಚ್ಚಾಟ ನಡೆಸಿದ್ದಾನೆ.
ಕಳೆದ ರಾತ್ರಿ 9 ಗಂಟೆಯ ವೇಳೆಗೆ ಯುವಕ ಇದ್ದಕ್ಕಿದಂತೆ ದೇವಸ್ಥಾನ ಪ್ರವೇಶಿಸಿದ್ದಾನೆ. ಬೆತ್ತಲೆಯಾಗಿ ಡ್ಯಾನ್ಸ್ ಮಾಡಿದ್ದಲ್ಲದೇ, ಗರ್ಭಗುಡಿ ಪ್ರವೇಶಿಸಲು ಯತ್ನಿಸಿದ್ದಾನೆ. ಈ ವೇಳೆ ದೇವಾಲಯದ ಸಿಬ್ಬಂದಿ, ಯುವಕನನ್ನು ತಡೆದಿದ್ದಾರೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ದೇವಸ್ಥಾನದಲ್ಲಿ ಪುಂಡಾಟ ನಡೆಸಿದ್ದು ಆತನ ಪುಂಡಾಟ ದೇವಾಲಯದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಗರ್ಭಗುಡಿ ಬಾಗಿಲು ಬಂದ್ ಮಾಡಿ ಬೆದರಿಸಿ ಯುವಕನನ್ನು ಹೊರಗೆ ಕಳುಹಿಸಿದ್ದಾರೆ. ವ್ಯಕ್ತಿ ಗಾಂಜಾ ಮತ್ತಿನಲ್ಲಿ ಈ ರೀತಿ ವರ್ತಿಸಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದರೆ, ಅಧಿಕಾರಿಗಳು ಮಾತ್ರ ವ್ಯಕ್ತಿ ಗಾಂಜಾ ವ್ಯಸನಿ ಅಲ್ಲ, ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ.