ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನವವಧು.. ವರದಕ್ಷಿಣೆಗಾಗಿ ಕೊಲೆ ಮಾಡಿರುವುದಾಗಿ ಪೋಷಕರ ಆರೋಪ…

89
firstsuddi

ಹಾಸನ : ಮದುವೆಯಾದ ಮೂರನೇ ವಾರಕ್ಕೆ ನವವಧು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನದ ಸಲೀಂ ನಗರದಲ್ಲಿ ನಡೆದಿದೆ. ಫಿಜಾ ಖಾನಂ (22) ಮೃತ ನವವಧು. ವರದಕ್ಷಿಣೆಗಾಗಿ ಮಗಳನ್ನು ಕೊಲೆ ಮಾಡಿರುವುದಾಗಿ ಮದುಮಗಳ ಪೋಷಕರು ಆರೋಪ ಮಾಡಿದ್ದಾರೆ.

ಡಿಸೆಂಬರ್ 2 ರಂದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಸನದ ಶಾಗಿಲ್ ಅಹಮದ್ ನನ್ನು ಮದುವೆಯಾಗಿದ್ದರು. ನಮ್ಮ ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಅಳಿಯ ಹಾಗೂ ಅವರ ಮನೆಯವರ ವಿರುದ್ಧ ಯುವತಿ ಪೋಷಕರು ಆರೋಪ ಮಾಡುತ್ತಿದ್ದಾರೆ.

ಈ ಸಂಬಂಧ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.