ಮೂಡಿಗೆರೆ : ಬರೋಬ್ಬರಿ 22 ವರ್ಷಗಳ ಬಳಿಕ ಮಗಳು ಮತ್ತೆ ತಾಯಿ ಮಡಿಲು ಸೇರಿದ ಮನ ಕಲಕುವ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ.
ಅಂಜಲಿ ಎಂಬುವರು ತಮ್ಮ ತಾಯಿ ಚೈತ್ರಾ ಎಂಬುವರನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 9 ವರ್ಷ ವಯಸ್ಸಿನಲ್ಲಿ ಅಂಜಲಿ ನಾಪತ್ತೆಯಾಗಿದ್ದರು. ನಂತರ ಅವರು ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಕೇರಳದ ನೆಲ್ಲಮಣಿಯಲ್ಲೇ ಸಾಜಿಯೊಂದಿಗೆ ಅಂಜಲಿ ವಿವಾಹವಾಗಿ ಜೀವನ ಸಾಗಿಸುತ್ತಿದ್ದರು.
ಕಳೆದ 3 ವರ್ಷದಿಂದ ಅಂಜಲಿ ಅವರು ತಮ್ಮ ತಾಯಿಗಾಗಿ ಹುಡುಕಾಟ ನಡೆಸಿದ್ದರು. ಇದನ್ನು ಮಂಗಳೂರಿನ ಸಮಾಜ ಸೇವಕರಾದ ಫಿಶ್ಮೋಣು, ಮುಸ್ತಾಫರ್ ಅವರ ಬಳಿ ಹೇಳಿಕೊಂಡಿದ್ದಳು. ಹಲವು ವರ್ಷಗಳ ಹುಡುಕಾಟದ ಬಳಿಕ ಇದೀಗ ಅಂಜಲಿ ಅವರ ತಾಯಿ ಚೈತ್ರಾ ಅವರು ಮೂಡಿಗೆರೆಯಲ್ಲಿ ಪತ್ತೆಯಾಗಿದ್ದು,ಭೇಟಿಯಾಗುತ್ತಿದ್ದಂತೆ ತಾಯಿ, ಮಗಳು ಪರಸ್ಪರ ತಬ್ಬಿ ಕಣ್ಣೀರಿಟ್ಟಿದ್ದಾರೆ. ತಾಯಿ ಮಗಳ ಈ ದೃಶ್ಯ ಮನಕಲಕುವಂತಿತ್ತು.










