ಟ್ಯಾಂಕರ್ ನಿಂದ ವಿಷಕಾರಿ ಅನಿಲ ಸೋರಿಕೆ – 6 ಮಂದಿ ಸಾವು, 20ಕ್ಕೂ ಹೆಚ್ಚು ಜನರು ಅಸ್ವಸ್ಥ…

93
firstsuddi

ಸೂರತ್: ಗುಜರಾತ್ ನ ಸೂರತ್ ನಲ್ಲಿರುವ ಕೆಮಿಕಲ್ ಯೊಂದರ ಸಮೀಪ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್ ನಿಂದ ವಿಷಕಾರಿ ಅನಿಲ ಸೋರಿಕೆಯಾಗಿ 6 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಚಿನ್ ಜಿಐಡಿಸಿ ಪ್ರದೇಶದಲ್ಲಿರುವ ರಾಜಕಮಲ್ ಚಿಕ್ಕಡಿ ಪ್ಲಾಟ್ ನಂ. 362 ರ ಹೊರಗೆ ನಿಂತಿದ್ದ ರಾಸಾಯನಿಕ ಟ್ಯಾಂಕರ್ ನಿಂದ ವಿಷಕಾರಿ ಅನಿಲ ಸೋರಿಕೆಯಾಗಿದೆ. ಈ ವೇಳೆ ಟ್ಯಾಂಕರ್ ನಿಂದ 10 ಮೀಟರ್ ದೂರದಲ್ಲಿ ಮಲಗಿದ್ದ ಹಲವಾರು ಕಾರ್ಮಿಕರಿಗೆ ಉಸಿರುಕಟ್ಟಿದೆ. ಸದ್ಯ ಎಲ್ಲರನ್ನು ನ್ಯೂ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿಯೂ 8 ಮಂದಿಯ ಸ್ಥಿತಿ ಗಂಭೀರವಾಗಿದೆ.

ಈ ಬಗ್ಗೆ ವೈದ್ಯರು ಮಾತನಾಡಿ, ಬೆಳಗ್ಗೆ 5 ಗಂಟೆ ಸುಮಾರಿಗೆ ಗ್ಯಾಸ್ ಸೋರಿಕೆ ವಿಚಾರವಾಗಿ ಕರೆ ಬಂದಿದ್ದು, ಕೂಡಲೇ ಸಕಲ ಸಿದ್ಧತೆಯೊಂದಿಗೆ ಸಿದ್ಧರಾಗುವಂತೆ ಸೂಚಿಸಲಾಗಿತ್ತು. 22 ಮಂದಿ ಕಾರ್ಮಿಕರನ್ನು ಆ್ಯಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕರೆತರಲಾಯಿತು. ಅದರಲ್ಲಿ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತರ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಕೆಲ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.