ವಾಣಿಜ್ಯ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ…

75
firstsuddi

ನವದೆಹಲಿ : ಕೇಂದ್ರ ಹಣಕಾಸು ಬಜೆಟ್ ಮಂಡನೆ ಬೆನ್ನಲ್ಲೇ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರವನ್ನು ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ಇಳಿಕೆ ಮಾಡಿವೆ.

19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 91.50 ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ. ದರ ಇಳಿಕೆಯಿಂದಾಗಿ ದೆಹಲಿಯಲ್ಲಿ 19ಕೆಜಿ ಸಿಲಿಂಡರ್ ನ ಬೆಲೆ 1907 ರೂಪಾಯಿ ಆಗಲಿದೆ. ಜನವರಿಯಲ್ಲಿ ವಾಣಿಜ್ಯ ಸಿಲಿಂಡರ್ ನ ಬೆಲೆ 102 ರೂಪಾಯಿ ಇಳಿಕೆಯಾಗಿತ್ತು. ಇದೀಗ 91 ರೂಪಾಯಿ ಕಡಿತಗೊಳಿಸಲಾಗಿದೆ. ಆದರೆ 14.2 ಕೆಜಿ ತೂಕದ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.