ಮುಸ್ಲಿಂ ವೇಷ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 6 ಮಂದಿ ಪೊಲೀಸ್ ವಶಕ್ಕೆ…

78
firstsuddi

ಬೆಳಗಾವಿ : ಮುಸ್ಲಿಂ ವೇಷ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರು ಮಂದಿಯನ್ನು ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ವೀರಭದ್ರ ನಗರದಲ್ಲಿ ಆಂದ್ರ ಮೂಲದ ಆರು ಮಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಪದೇ ಪದೇ ಒಂದೇ ಏರಿಯಾದಲ್ಲಿ ಓಡಾಡೋದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಾವು ಆಂದ್ರ ಮೂಲದ ಹಿಂದುಗಳು. ಹೊಟ್ಟೆಪಾಡಿಗಾಗಿ ಮುಸ್ಲಿಂ ವೇಷವನ್ನು ಧರಿಸಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದೇವೆ ಎಂದಿದ್ದಾರೆ.

ಸ್ಥಳೀಯರು ಆರು ಮಂದಿಯನ್ನು ಹಿಡಿದು ಥಳಿಸಿ ಮಾರ್ಕೆಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿ ಪೊಲೀಸ್ ಠಾಣೆಗೆ ಕರೆದ್ಯೊಯ್ದಿದ್ದಾರೆ.