ಮಂಗಳೂರು : ಟೂತ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ನಿವಾಸಿ 22 ವರ್ಷದ ಶ್ರಾವ್ಯ ಮೃತ ಯುವತಿ. ಮನೆಯ ಬಾತ್ ರೂಂ ನ ಕಿಟಕಿ ಬಳಿ ಟೂತ್ ಪೇಸ್ಟ್ ಹಾಗೂ ಇಲಿ ಪಾಷಾಣದ ಪೇಸ್ಟ್ ಇತ್ತು. ಕತ್ತಲಿದ್ದಿದ್ದರಿಂದ ತಿಳಿಯದೆ ಇಲಿ ಪಾಷಾಣ ಕೈಗೆತ್ತಿಕೊಂಡಿದ್ದ ಯುವತಿ ಹಲ್ಲುಜ್ಜಿದ್ದಾಳೆ. ಆದರೆ ಇಲಿ ಪಾಷಾಣ ಎಂದು ತಡವಾಗಿ ಯುವತಿಗೆ ಗೊತ್ತಾಗಿದೆ. ನಂತರ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.










