ಬೆಳಗಾವಿಯಲ್ಲಿ ಭಾರತ – ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ…

65
firstsuddi

ಬೆಳಗಾವಿ : ನಗರದ ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ ಭಾರತ- ಜಪಾನ್ ಜಂಟಿ ಮಿಲಿಟರಿ ಸಮರಾಭ್ಯಾಸ ನಡೆಯುತ್ತಿದೆ. ಫೆಬ್ರವರಿ 27 ರಂದು ಆರಂಭವಾಗಿರುವ ಜಂಟಿ ಮಿಲಿಟರಿ ಸಮರಾಭ್ಯಾಸ ಮಾರ್ಚ್ 10ರವರೆಗೆ ನಡೆಯಲಿದ್ದು, ಇಂದು ಭಾರತ- ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ನಡೆಸಲಾಗಿದೆ.

ವಾರ್ಷಿಕ ತರಬೇತಿ ಭಾಗವಾಗಿರುವ ‘ಧರ್ಮ ಗಾರ್ಡಿಯನ್ 2022’ ಕಾರ್ಯಕ್ರಮ ಇದ್ದಾಗಿದ್ದು 2018ರಿಂದಲೂ ಜಂಟಿ ಸಮರಾಭ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್ ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿಯಾಗಲಿವೆ.

ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ ಇದಾಗಿದ್ದು, ಮನೆಗಳ ಮೇಲಿನ ಡ್ರಿಲ್ ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ತರಬೇತಿ ಇಲ್ಲಿ ನಡೆಯಲಿದೆ.