ಹುಕ್ಕೇರಿ : ಮದುವೆ ಸಮಾರಂಭವೊಂದರಲ್ಲಿ ಮಾಜಿ ಸೈನಿಕರೊಬ್ಬರು ಬಂದೂಕಿನಿಂದ ಗಾಳಿಯಲ್ಲಿ ಗುಂಡಿನ ಸುರಿಮಳೆಗೈದಿದ್ದಾರೆ. ಇದರಿಂದ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದವರು ಕೆಲ ಕಾಲ ದಂಗಾಗಿದ್ದಾರೆ. ಗುಂಡು ಹಾರಿಸಿರುವ ಮಾಜಿ ಸೈನಿಕನ ವಿಡಿಯೋ ವೈರಲ್ ಆಗಿದೆ.
ಹುಕ್ಕೇರಿ ತಾಲೂಕಿನ ಎಲಿಮನ್ನೋಳಿ ಗ್ರಾಮದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಸೈನಿಕ ರಫಿಕ್ ಅಹಮ್ಮದ ತಹಸೀಲ್ದಾರ್ ಎಂಬಾತ ತನ್ನ 9.62 mmನ ಲೈಸೆನ್ಸ್ ಪಿಸ್ತೂಲಿನಿಂದ ಐದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗನ್ ಲೈಸನ್ಸ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೋಲಿಸರು ಮಾಜಿ ಸೈನಿಕನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.