ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ನೋಟಿಸ್ ಜಾರಿ…

83
firstsuddi

ಬೆಂಗಳೂರು : ಶಬ್ದ ಮಾಲಿನ್ಯ ನಿಯಮ ಪಾಲಿಸದ ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ಪೊಲೀಸ್ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ.

ನಗರದ ಒಟ್ಟು 125 ಮಸೀದಿ, 83 ದೇವಸ್ಥಾನ, 22 ಚರ್ಚ್‍ಗಳಿಗೆ ನೋಟಿಸ್ ಜಾರಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಒಟ್ಟಾರೆ 301 ಧಾರ್ಮಿಕ ಸ್ಥಳಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಅಲ್ಲದೇ, ಪಬ್ ಬಾರ್ ಅಂಡ್ ರೆಸ್ಟೋರೆಂಟ್​ಗಳಿಗೆ 59 ಹಾಗೂ ಕೈಗಾರಿಕೆಗಳಿಗೆ 12 ನೋಟಿಸ್‌ಗಳನ್ನು ನೀಡಲಾಗಿದೆ.

ಬೆಂಗಳೂರಿನ ಒಟ್ಟು 7 ವಿಭಾಗದ ಪೊಲೀಸರು ಬಾರ್ ಅಂಡ್ ರೆಸ್ಟೊರೆಂಟ್, ಪಬ್, ಕ್ಲಬ್, ಕೈಗಾರಿಕೆಗಳು, ಮಸೀದಿಗಳು, ದೇವಸ್ಥಾನಗಳು, ಚರ್ಚ್‌ಗಳಿಗೆ ಎಷ್ಟು ನೋಟಿಸ್ ನೀಡಿದ್ದಾರೆ ಎಂಬುದನ್ನು ಹೈಕೋರ್ಟ್ ಕೇಳಿತ್ತು. ದೇವಸ್ಥಾನ ಹಾಗೂ ಚರ್ಚ್​​ಗಳಿಗೆ ಹೋಲಿಸಿದರೆ ಮಸೀದಿಗಳಲ್ಲೆ ಹೆಚ್ಚು ಶಬ್ದ ಮಾಲಿನ್ಯ ನಿಯಮ ಮೀರಿರುವುದು ಕಂಡು ಬಂದಿದೆ.

ರಾಜ್ಯದಲ್ಲಿ ಹಿಜಾಬ್ ಬಳಿಕ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರಿಗೆ ನಿಷೇಧ, ಹಲಾಲ್ ಕಟ್ ಅಭಿಯಾನ ಮಾಡಿದ್ದ ಹಿಂದೂ ಸಂಘಟನೆಗಳು ಇದೀಗ ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಅಭಿಯಾನ ಆರಂಭಿಸಿವೆ.