ಮಂಗಳೂರು : ಆರ್ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಕಲ್ಲಡ್ಕದ ತನ್ನ ವಿದ್ಯಾಸಂಸ್ಥೆಯಲ್ಲಿದ್ದಾಗ ಪ್ರಭಾಕರ್ ಭಟ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಡಾ. ಭಟ್ ಚೇತರಿಸಿಕೊಂಡಿದ್ದು, ಯಾರೂ ಗಾಬರಿಗೆ ಒಳಗಾಗುವುದು ಬೇಡ ಎಂದು ಆಪ್ತ ವಲಯಗಳು ತಿಳಿಸಿವೆ.










