ಪಿಎಸ್‍ಐ ಅಕ್ರಮ ನೇಮಕಾತಿ ; ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮೊಬೈಲ್ ಬಳಕೆ…

64
firstsuddi

ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೊಬೈಲ್ ಬಳಸಿ ಕಿಂಗ್ ಪಿನ್ ಆರ್ ಡಿ ಪಾಟೀಲ್ ಅಕ್ರಮ ಎಸೆಗಿದ್ದಾನೆ ಎಂಬುದು ತನಿಖೆಯಿಂದ ಹೊರಬಿದ್ದಿದೆ.

ಸೊನ್ನ ಗ್ರಾಮದ ಲಕ್ಷ್ಮಿಪುತ್ರ ಎಂಬಾತ ಆರ್.ಡಿ ಪಾಟೀಲ್ ಬಳಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಲಕ್ಷ್ಮಿಪುತ್ರ ಕೋವಿಡ್ ನಿಂದ ಮೃತಪಟ್ಟ ಬಳಿಕ ಆತನ ಎರಡು ಮೊಬೈಲ್ ಗಳಲ್ಲಿ ಒಂದು ಮೊಬೈಲ್ ನ್ನ ಆರ್ ಡಿ ಪಾಟೀಲ್ ಇಟ್ಟುಕೊಂಡಿದ್ದನಂತೆ. ಅದೇ ಮೊಬೈಲ್ ನಿಂದ ಪಿಎಸ್ ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದು, ತಮ್ಮ ಬಳಿಯಿರುವ ಮೊಬೈಲ್ ಬಳಸಿದರೆ ಪ್ರಕರಣ ಬಯಲಿಗೆ ಬರುತ್ತದೆ ಎಂದು ಮೃತ ವ್ಯಕ್ತಿಯ ಮೊಬೈಲ್ ಬಳಕೆ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಬಹಿರಂಗವಾಗಿದೆ.

ಇನ್ನೂ ಎರಡು ದಿನಗಳ ಹಿಂದೆ ಆರ್.ಡಿ ಪಾಟೀಲ್ ಸ್ನೇಹಿತ ಮಂಜುನಾಥ್ ಮಲ್ಲುಗೌಡನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಇಬ್ಬರನ್ನು 13 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.