ಕನ್ನಯ್ಯಲಾಲ್ ಹತ್ಯೆ ಮಾಡಿ ವಿಕೃತಿ ಮೆರೆದ ಕೃತ್ಯ ಖಂಡನೀಯ : ಎಂ.ಕೆ.ಪ್ರಾಣೇಶ್.

148
firstsuddi

ಕೊಟ್ಟಿಗೆಹಾರ : ರಾಜಸ್ಥಾನದಲ್ಲಿ ಕನ್ನಯ್ಯಲಾಲ್ ಹತ್ಯೆ ಮಾಡಿ ವಿಕೃತಿ ಮೆರೆದ ಕೃತ್ಯ ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಹೇಳಿದರು.

ಬಣಕಲ್ ಟೈಲರ್ ಅಸೋಶಿಯೇಷನ್ ವತಿಯಿಂದ ಕರೆ ನೀಡಲಾಗಿದ್ದ ಬಂದ್ ಹಿನ್ನಲೆಯಲ್ಲಿ ಬಣಕಲ್ ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ತಪ್ಪು ಮಾಡದ ಕನ್ನಯ್ಯಲಾಲ್ ತಮ್ಮ ಪಾಡಿಗೆ ತಾವು ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಗ್ರಾಹಕರಾಗಿ ಬಂದ ಹಂತಕರು ಬಳಿಕ ಕನ್ನಯ್ಯಲಾಲ್ ಅವರ ಕುತ್ತಿಗೆಯನ್ನು ಸೀಳಿ ಅಮಾನುಷವಾಗಿ ಹತ್ಯೆ ಗೈದಿದ್ದಾರೆ. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ವಿಕೃತಿ ಮೆರೆದಿದ್ದಾರೆ. ಇದೇ ರೀತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಹ ಇದೇ ಕತ್ತಿಯಿಂದ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುವುದು ಇಡೀ ದೇಶವೇ ಖಂಡಿಸುತ್ತದೆ ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ರಘು ಜೆ,ಎಸ್, ಮಾತನಾಡಿ, ದೇಶದಲ್ಲಿ ಹಿಂದೂ ಯುವಕರ ಹತ್ಯೆಯಾದರೆ ಕಾಂಗ್ರೆಸ್ ತುಟಿ ಬಿಚ್ಚಲ್ಲ. ಕಾಂಗ್ರೆಸ್ ಬೆಂಬಲಿತ ಬುದ್ಧಿ ಜೀವಿಗಳು ದೇಶಕ್ಕೆ ಮಾರಕವಾಗಿದ್ದಾರೆ. ಭಾವೈಕ್ಯ ಮನೋಭಾವದಿಂದ ಇರುವವರಿಗೆ ಸಹಿಷ್ಣುತೆ ಪಾಠ ಹೇಳುತ್ತಾರೆ, ಕ್ರೂರತೆ, ಮತಾಂಧತೆ ಬೆಳೆಸಿಕೊಂಡವರಿಗೆ ಏನೂ ಹೇಳುವುದಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಎಂಪಿ ಕುಮಾರಸ್ವಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್, ಟೈಲರ್ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಮುಂತಾದವರು ಇದ್ದರು.

ಬಂದ್ ಗೆ ಬಣಕಲ್ ನ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಆಟೋ ಚಾಲಕರ ಸಂಘ, ಗ್ಯಾರೇಜ್ ಸಂಘ, ವರ್ತಕರ ಸಂಘ ಬೆಂಬಲ ಸೂಚಿಸಿದವು. ಬಣಕಲ್ ಮತ್ತು ಕೊಟ್ಟಿಗೆಹಾರದಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬಣಕಲ್‍ನಲ್ಲಿ ಸಂತೆಯೂ ನಡೆಯಲಿಲ್ಲ. ವಾಹನ ಸಂಚಾರ ಎಂದಿನಂತಿತ್ತು. ಬ್ಯಾಂಕ್, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ತೆರೆದಿದ್ದವು.