ನವದೆಹಲಿ: ಇಳಿವಯಸ್ಸಿನಲ್ಲೂ ಭಗವಾನಿ ದೇವಿಯವರು ಇಡೀ ದೇಶ ಮೆಚ್ಚುವ ಸಾಧನೆ ಮಾಡಿ ತೋರಿಸಿದ್ದಾರೆ. ಫಿನ್ಲ್ಯಾಂಡ್ನ ಟಂಪೆರೆ ಎಂಬಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಿದ್ದ ಹರಿಯಾಣದ ಖಿಡ್ಕಾ ಗ್ರಾಮದ ನಿವಾಸಿ ಭಗವಾನಿ ದೇವಿ(94ವರ್ಷ) ಅವರು ಒಂದು ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದಿದ್ದಾರೆ.
100 ಮೀಟರ್ ಓಟ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದು, ಶಾಟ್ ಪುಟ್ ನಲ್ಲಿ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ. ಕೇವಲ 24.74 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿ ಚಿನ್ನದ ಪದಕ ಗಳಿಸಿದ್ದಾರೆ.
ಟ್ವೀಟ್‍ನಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಭಗವಾನಿ ದೇವಿಯವರನ್ನು ಹೊಗಳಿದ್ದು, ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಬರೆದುಕೊಂಡಿದೆ.
India's 94-year-old #BhagwaniDevi Ji has yet again proved that age is no bar!
She won a GOLD medal at the #WorldMastersAthleticsChampionships in Tampere in the 100m sprint event with a timing of 24.74 seconds.🥇She also bagged a BRONZE in Shot put.
Truly commendable effort!👏 pic.twitter.com/Qa1tI4a8zS
— Dept of Sports MYAS (@IndiaSports) July 11, 2022










