ಬಿಬಿಎಂಪಿ 55ನೇ ವಾರ್ಡ್ ಗೆ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ…

94
firstsuddi

ಬೆಂಗಳೂರು : ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ಸರ್ಕಾರ ಅಂತಿಮ ಆದೇಶ ಪ್ರಕಟಿಸಿದೆ. 198 ಇದ್ದ ವಾರ್ಡ್ ಗಳನ್ನು ಡಿ ಲಿಮಿಟೇಷನ್ ಮಾಡಿ 243 ವಾರ್ಡ್ ಗಳಾಗಿ ವಿಂಗಡಿಸಲಾಗಿದೆ.

ಸರ್ಕಾರ 29 ಜನವರಿ 2021ರಲ್ಲಿ ಡಿ ಲಿಮಿಟೇಷನ್ ಕಮಿಟಿ ರಚಿಸಿತ್ತು. ಈ ಸಮಿತಿಯಿಂದ 09 ಜೂನ್ 2022 ರಂದು ಸರ್ಕಾರಕ್ಕೆ ವಾರ್ಡ್ ಮರುವಿಂಗಡಣಾ ಪಟ್ಟಿ ಸಲ್ಲಿಕೆ ಮಾಡಿತ್ತು. ಬಳಿಕ ಸಾರ್ವಜನಿಕರ ಸಲಹೆ ಸೂಚನೆ ಮೇರೆಗೆ 15 ದಿನಗಳ ಕಾಲವಕಾಶ ನೀಡಿದ್ದ ಸರ್ಕಾರ ಇದೀಗ ಅಂತಿಮವಾಗಿ ಬೆಂಗಳೂರು ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಿದೆ.

ಬಿಬಿಎಂಪಿ ವಾರ್ಡ್ ನಂಬರ್ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ. ವಾರ್ಡ್ ಸಂಖ್ಯೆ 55 ಈ ಮೊದಲು ಕಾವೇರಿ ನಗರ ಆಗಿತ್ತು. ಇದೀಗ ಕಾವೇರಿ ನಗರದ ಹೆಸರು ಬದಲಿಸಿ ಪುನೀತ್ ರಾಜ್ ಕುಮಾರ್ ವಾರ್ಡ್ ಎಂದು ನಾಮಕರಣ ಮಾಡಲಾಗಿದೆ.

ಜೊತೆಗೆ ಬಿಬಿಎಂಪಿ ಡಿ ಲಿಮಿಟೇಷನ್ ಸಮಿತಿ ಸಲ್ಲಿಸಿದ್ದ ಪಟ್ಟಿಯಲ್ಲಿ 77 ವಾರ್ಡ್ ಅನ್ನು ಮೋದಿ ಗಾರ್ಡನ್ ಎಂದು ಹೆಸರು ಬದಲಾವಣೆ ಮಾಡಲಾಗಿದೆ. ವಾರ್ಡ್ 77ಕ್ಕೆ ಮೋದಿ ಗಾರ್ಡನ್ ಹೆಸರು ಇಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಹಳೆಯ ದೇವರಜೀವನಹಳ್ಳಿ ವಾರ್ಡ್ ಅಂತಲೇ ಹೆಸರು ಉಳಿಸಿಕೊಳ್ಳಲಾಗಿದೆ. ಅದೇ ರೀತಿ ಕೆಂಗೇರಿ ವಾರ್ಡ್ ಬದಲು ಕೆಂಗೇರಿ ಉಪನಗರ ವಾರ್ಡ್ ಎಂದು ಕರಡು ಪ್ರತಿಯಲ್ಲಿತ್ತು. ಕೆಂಗೇರಿ ವಾರ್ಡ್ ಹೆಸರು ತೆಗೆದಿದ್ದಕ್ಕೆ ಭಾರೀ ವಿರೋಧ ಕೇಳಿ ಬಂದ ಹಿನ್ನಲೆ ಇದೀಗ ಕೆಂಗೇರಿ ಉಪನಗರ ವಾರ್ಡ್ ತೆಗೆದು ಹಳೆ ಹೆಸರು ಕೆಂಗೇರಿ ವಾರ್ಡ್ ಎಂದು ಅಂತಿಮಗೊಳಿಸಲಾಗಿದೆ.