ಸಿ.ಟಿ.ರವಿ ಹುಟ್ಟುಹಬ್ಬ : ಬಡವರಿಗೆ ಉಪಹಾರ ವಿತರಣೆ…

61
firstsuddi

ಚಿಕ್ಕಮಗಳೂರು : ಶಾಸಕ ಸಿ.ಟಿ.ರವಿ ಅವರ ಹುಟ್ಟುಹಬ್ಬವನ್ನು ಸವಿತಾ ಮೀಸಲಾತಿ ಒಕ್ಕೂಟ, ಸವಿತಾ ಸ್ವಸಹಾಯ ಸಂಘ, ಮಡಿವಾಳ ಮತ್ತು ಕುರುಬರ ಸಂಘದ ಪದಾಧಿಕಾರಿಗಳು ನಗರದಲ್ಲಿ ಇಂದು ಅರ್ಥಪೂರ್ಣವಾಗಿ ಆಚರಿಸಿದರು.

ಬೆಳಿಗ್ಗೆ ಶ್ರೀ ಬೋಳರಾಮೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಪದಾಧಿಕಾರಿಗಳು ಸಿ.ಟಿ.ರವಿ ಅವರಿಗೆ ಧೀರ್ಘಾಯಸ್ಸು ಕೋರುವುದರ ಜೊತೆಗೆ ಮುಂದಿನ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿದರು. ನಂತರ ದೇವಾಲಯದ ಆವರಣದಲ್ಲಿನ ಭಿಕ್ಷುಕರಿಗೆ ಹಾಗೂ ನಗರದ ಐ.ಜಿ.ರಸ್ತೆ, ಮಾರ್ಕೆಟ್ ರಸ್ತೆ, ಬಸ್ ಸ್ಟ್ಯಾಂಡ್, ಸಂತೆ ಮೈದಾನಕ್ಕೆ ತೆರಳಿ ಬಡವರಿಗೆ ಉಪಹಾರ ವಿತರಿಸಿದರು.

ಸವಿತಾ ಮೀಸಲಾತಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಜೆ.ಸತ್ಯನಾರಾಯಣ ಮಾತನಾಡಿ ಬಡವರು, ಹಿಂದುಳಿದವರು, ದೀನರು, ದಲಿತರ ಬಗ್ಗೆ ಕಾಳಜಿ ಹೊಂದಿರುವ ಶಾಸಕ ಸಿ.ಟಿ.ರವಿ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದರು.

ಸವಿತಾ ಮೀಸಲಾತಿ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್, ಗೌರವಾಧ್ಯಕ್ಷ ಟಿ.ಲಕ್ಷ್ಮೀಕಾಂತ್, ಉಪಾಧ್ಯಕ್ಷ ಎಂ.ಸತೀಶ್, ಮಡಿವಾಳ ಸಮಾಜದ ಮುಖಂಡ ಮಂಜುನಾಥ್, ಕುರುಬರ ಸಂಘದ ಮುಖಂಡ ಜೆ.ಆರ್.ಕುಮಾರ್, ತೇಗೂರು ವಿಜಯ್, ಸಿದ್ದರಾಜು, ಶ್ರೀಕಾಂತ್ ನಾವಿ, ಸಂಪತ್ ಕುಮಾರ್, ರಾಜೇಶ್, ಪ್ರಕಾಶ್ ಹಾಜರಿದ್ದರು.