ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ಫೈನಲ್‍ಗೆ ಲಗ್ಗೆ ಇಟ್ಟ ನೀರಜ್ ಚೋಪ್ರಾ.

84
firstsuddi

ವಾಷಿಂಗ್ಟನ್: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಫೈನಲ್ ಗೆ ಪ್ರವೇಶ ಪಡೆದಿದ್ದಾರೆ. ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ ಚೋಪ್ರಾ ಮೊದಲ ಪ್ರಯತ್ನದಲ್ಲೇ 88.39 ಮೀ. ಜಾವೆಲಿನ್ ಎಸೆದು ಫೈನಲ್ ಗೆ ಲಗ್ಗೆಯಿಟ್ಟರು.

ಅಮೆರಿಕದ ಹೈವರ್ಡ್ ಮೈದಾನದಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅಂತಿಮ ಹಂತವು ಜುಲೈ 24ರಂದು (ಭಾನುವಾರ) ಮುಂಜಾನೆ ನಡೆಯಲಿದೆ. ಕಳೆದ ತಿಂಗಳು ಸ್ಟಾಕ್ ಹೋಮ್ ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ನಲ್ಲಿ ನೀರಜ್ 89.94 ಮೀಟರ್ ಗಳ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು.