ಭಾರತಕ್ಕೆ 3ನೇ ಚಿನ್ನದ ಪದಕ – ವೇಟ್​ಲಿಫ್ಟಿಂಗ್​ನಲ್ಲಿ ಅಚಿಂತಾ ಶೆಯುಲಿ ಸಾಧನೆ…

104
firstsuddi

ಬರ್ಮಿಂಗ್‍ಹ್ಯಾಮ್ : 2022 ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 3ನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಅಚಿಂತಾ ಶೆಯುಲಿ 73 ಕೆಜಿ ತೂಕ ವಿಭಾಗದಲ್ಲಿ ಒಟ್ಟು 313 ಕೆಜಿ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

20 ವರ್ಷದ ಅಚಿಂತಾ ಶೆಯುಲಿ ಸ್ನ್ಯಾಚ್ ವಿಭಾಗದಲ್ಲಿ ಮೊದಲ ಸಲವೇ 143 ಕೆಜಿ ಎತ್ತಿದರೆ, ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 170 ಕೆಜಿ ಭಾರವನ್ನು ಎತ್ತಿ ಕಾಮನ್ ವೆಲ್ತ್ ದಾಖಲೆ ಬರೆದರು.

ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು, ಪುರುಷರ 67 ಕೆಜಿ ವಿಭಾಗದಲ್ಲಿ ಜೆರೆಮಿ ಲಾಲ್ರಿನ್ನುಂಗಾ ಬಳಿಕ ಅಚಿಂತಾ ಶುಯೆಲಿ 3ನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಭಾರತ 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದ ಮೂಲಕ ಒಟ್ಟು 6 ಪದಕ ಗೆದ್ದುಕೊಂಡಿದೆ.