ಮಲಗಿದ್ದ ಮಹಿಳೆ ಮೈ ಮೇಲೆ ಕುಳಿತ ನಾಗರಹಾವು.. ಎದೆ ಝಲ್ ಎನ್ನಿಸುತ್ತೆ ಈ ದೃಶ್ಯ…

72
firstsuddi

ಕಲಬುರಗಿ : ಮಲಗಿದ್ದ ಮಹಿಳೆ ಮೇಲೆ ನಾಗರ ಹಾವೊಂದು ಹೆಡೆ ಎತ್ತಿ ಕುಳಿತಿದೆ. ಆದರೆ ಮಹಿಳೆ ಪವಾಡದ ರೀತಿಯಲ್ಲಿ ನಾಗರ ಹಾವಿನಿಂದ ಪಾರಾಗಿದ್ದಾರೆ. ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಈ ವಿಚಿತ್ರ ಹಾಗೂ ಪವಾಡ ರೀತಿಯ ಘಟನೆ ನಡೆದಿದೆ.

ಜಮೀನಿನಲ್ಲಿ ಮಲಗಿದ್ದ ಭಾಗಮ್ಮ ಬಡದಾಳ್ ಅವರ ಮೈ ಮೇಲೆ ನಾಗರಹಾವೊಂದು ಹೆಡೆ ಎತ್ತಿ ಕುಳಿತುಕೊಂಡಿತ್ತು. ಇದನ್ನು ಕಂಡು ಭಯಗೊಂಡ ಭಾಗಮ್ಮ ಮಲಗಿದ್ದ ಜಾಗದಲ್ಲಿಯೇ ಶ್ರೀಶೈಲ ಮಲ್ಲಯ್ಯ ಕಾಪಾಡಪ್ಪ ಅಂತಾ ಬೇಡಿಕೊಂಡಿದ್ದಾರೆ. ಈ ವೇಳೆ, ಮಹಿಳೆಗೆ ಏನು ಹಾನಿ ಮಾಡದೇ ನಾಗರಾಜ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಎಲ್ಲ ದೃಶ್ಯ ಸ್ಥಳಿಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.