ಮಧ್ಯರಾತ್ರಿ 3 ಗಂಟೆವರೆಗೆ ಸೈಮಾ ಪಾರ್ಟಿ – ಹೋಟೆಲ್ ವಿರುದ್ಧ ಎಫ್ಐಆರ್ ದಾಖಲು…

58
firstsuddi

ಬೆಂಗಳೂರು : ಇದೇ ಮೊದಲ ಬಾರಿಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. 10ನೇ ವರ್ಷದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಸೈಮಾ ಅವಾರ್ಡ್ ನಲ್ಲಿ ಭಾಗಿಯಾಗಿದ್ದ ಗಣ್ಯರಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್ ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದೀಗ ಅವಧಿ ಮೀರಿ ಮಧ್ಯರಾತ್ರಿವರೆಗೂ ಪಾರ್ಟಿ ಮಾಡುವುದಕ್ಕೆ ಅವಕಾಶ ಕೊಟ್ಟ ಹೋಟೆಲ್ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೋಟೆಲ್ ನ ಮ್ಯಾನೇಜರ್ ಮತ್ತು ಪಾರ್ಟಿ ಆಯೋಜಕರ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿ ಇರುವ ಐಷಾರಾಮಿ ಹೋಟೆಲ್ ನಲ್ಲಿ ಸೆಪ್ಟೆಂಬರ್ 12ರಂದು ‘ಸೈಮಾ’ ಪಾರ್ಟಿ ನಡೆದಿತ್ತು. ತಡರಾತ್ರಿ 1 ಗಂಟೆಗೆ ಪಾರ್ಟಿ ಮುಗಿಸಬೇಕು ಎಂದು ಪೊಲೀಸರು ತಿಳಿಸಿದ್ದರೂ, ಮಧ್ಯರಾತ್ರಿ 3.30ರವರೆಗೂ ಪಾರ್ಟಿ ನಡೆದಿದೆ. ಹಾಗಾಗಿ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ಚಲನಚಿತ್ರರಂಗದವರು ಸಹ ಭಾಗಿಯಾಗಿರುವ ಶಂಕೆಯಿದೆ. ಆದರೆ, ಎಫ್ ಐಆರ್ ನಲ್ಲಿ ಯಾರ ಹೆಸರೂ ದಾಖಲಿಸಿಲ್ಲ. ಕೇವಲ ಹೋಟೆಲ್ ಮ್ಯಾನೇಜರ್ ಹಾಗು ಆಯೋಜಕರ ಮೇಲೆ ದೂರು ದಾಖಲಾಗಿದೆ.