ಸಿದ್ದರಾಮಯ್ಯ ಇನ್ನು ನೂರು ಟ್ರೈನ್​ಗೆ ಟಿಪ್ಪು ಸುಲ್ತಾನ್, ಬಿನ್ ಲಾಡೆನ್, ಘಜನಿ ಮೊಹಮ್ಮದ್ ಹೆಸರಿಟ್ಟು ಓಡಿಸಲಿ : ಆರ್.ಅಶೋಕ್.

86
firstsuddi

ಬೆಂಗಳೂರು : ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನ ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಾಯಿಸಿದ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದರು. ಬಿಜೆಪಿ ಸರ್ಕಾರ ಬಿಜೆಪಿಯವರು ಬರಿ ಧರ್ಮ ರಾಜಕೀಯ ಮಾಡ್ತಾರೆ. ಒಡೆಯರ್ ಹೆಸರು ಇಡಲಿ ಪರ್ವಾಗಿಲ್ಲ ಆದ್ರೆ ಬೇರೆ ರೈಲುಗಳು ಇರ್ಲೇ ಇಲ್ವಾ. ಯಾವಾಗ್ಲು ಜಾತಿ ಜಾತಿಗಳ ನಡುವೆ ಧರ್ಮಗಳ ನಡುವೆ ಬೆಂಕಿ ಹಚ್ಚೊ ಕೆಲಸ ಮಾಡ್ತಾರೆ. ಬರಿ ದ್ವೇಷ ಹುಟ್ಟಾಕುವ ಕೆಲಸ ಮಾಡ್ತಾರೆ ಎಂದಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಆರ್ ಅಶೋಕ್ , ಸಿದ್ದರಾಮಯ್ಯ ಅವರು ಇನ್ನು ನೂರು ಟ್ರೈನ್ ತಂದು ಟಿಪ್ಪು ಸುಲ್ತಾನ್, ಬಿನ್ ಲಾಡೆನ್, ಘಜನಿ ಮೊಹಮ್ಮದ್ ಹೆಸರಿಟ್ಟು ಓಡಿಸಲಿ ಎಂದು ಸಚಿವ ಆರ್.ಅಶೋಕ್ ಟಾಂಗ್ ಕೊಟ್ಟರು.

ವಿಧಾನಸೌಧದಲ್ಲಿಂದು ರೈಲಿಗೆ ಟಿಪ್ಪು ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸರ್ಕಾರ ಒಳ್ಳೆಯ ಉದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ. ಮೈಸೂರು ಮಂಡ್ಯ ಭಾಗಕ್ಕೆ ನೀರು ಕೊಟ್ಟವರು ಒಡೆಯರ್. ತಮ್ಮ ಒಡವೆ ಮಾರಿ ಕೆಆರ್ಎಸ್ ಕಟ್ಟಿ ಕರ್ಣರಾದವರು. ಮೊದಲು ವಿದ್ಯುತ್ ತಯಾರಿಕೆ ಮಾಡಿದ್ದು, ಸೋಪ್, ಸಕ್ಕರೆ ತಯಾರಿಕೆ ಎಲ್ಲವನ್ನೂ ಕರ್ನಾಟಕಕ್ಕೆ ಕೊಟ್ಟವರು. ಅವರ ಹೆಸರಲ್ಲೇ ಜಂಬೂ ಸವಾರಿ ಆರಂಭವಾಗಿದ್ದು. ಟಿಪ್ಪು ಕನ್ನಡಿಗ ಅಂತ ಒಪ್ಪಿಯೇ ಇಲ್ಲ. ಟಿಪ್ಪು ಆಡಳಿತ ಭಾಷೆ ಪರ್ಶಿಯನ್. ಕಗ್ಗೊಲೆ ಮಾಡಿ, ಮತಾಂತರಗೊಳಿಸಿದ್ದಾರೆ. ಹಾಗಾಗಿ ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ. ಈ ಹೆಸರನ್ನು ಟ್ರೈನಿಗೆ ಇಟ್ರೆ ಜನರು ಮೆಚ್ತಾರೆ. ಅವರು ಅಧಿಕಾರಕ್ಕೆ ಬಂದಾಗ ಇಟ್ಟುಕೊಳ್ಳಲಿ. ನಮ್ಮ ಬೆಂಬಲ ಒಡೆಯರ್ ಅವರಿಗೆ ಎಂದರು.

ಇದೇ ವೇಳೆ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಲಾಗಿದೆ. ಮೀಸಲಾತಿ ಹೆಚ್ಚಿಸಲು ನಿನ್ನೆ ಡಿಸೈಡ್ ಆಗಿದೆ. ಈಗಾಗಲೇ ಮಧ್ಯಪ್ರದೇಶ, ತಮಿಳುನಾಡು, ಕೇರಳದಲ್ಲಿ ಜಾಸ್ತಿ ಇದೆ. ಇದನ್ನು ಕಾನೂನಾತ್ಮಕವಾಗಿ ತಂದು ಜಾರಿಗೊಳಿಸ್ತೇವೆ. ಈಗ ಬೇರೆ ರಾಜ್ಯಗಳಲ್ಲಿ ಮಾಡಿರೋದನ್ನ ಸ್ವಾಗತ ಮಾಡಿದ್ದಾರೆ. ನಮ್ಮಲ್ಲೂ ಬೇಡಿಕೆ ಹೆಚ್ಚಿರೋದ್ರಿಂದ ಜಾರಿಗೆ ತರ್ತೀವಿ ಎಂದರು.

ಶೆಡ್ಯೂಲ್ 9 ಸಿದ್ದರಾಮಯ್ಯಗೆ ಈಗ ನೆನಪಾಯ್ತಾ? ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗ ಅದನ್ನು ಡಿಸೈನ್ ಮಾಡಿದ್ದು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರು ಕಾಂಗ್ರೆಸ್. ಅಂಬೇಡ್ಕರ್ ಸತ್ತಾಗ ಅವರಿಗೆ ಹೂಳಲು ಜಾಗವನ್ನೂ ಸಹ ಕೊಡಲಿಲ್ಲ. ಅವರಿಗೆ ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂವಿಧಾನ ಬದ್ಧವಾಗಿ ನ್ಯಾಯ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಪ್ರತಾಪ್ ಸಿಂಹ ಟ್ವೀಟ್ : ರೈಲ್ವೆ ಸಚಿವಾಲಯ ಆದೇಶ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸಂಸದ ಪ್ರತಾಪಸಿಂಹ, ಇನ್ನು ಮುಂದೆ ಟಿಪ್ಪು ಎಕ್ಸ್ ಪ್ರೆಸ್ ಬದಲು ಒಡೆಯರ್ ಎಕ್ಸ್ ಪ್ರೆಸ್ ನಿಮಗೆ ಸೇವೆ ಒದಗಿಸಲಿದೆ. ಜತೆಗೆ, ಮೈಸೂರು-ತಾಳಗುಪ್ಪ ಬದಲು ಕುವೆಂಪು ಎಕ್ಸ್ ಪ್ರೆಸ್ ಆಗಿ ಬದಲಾಗಲಿದೆ. ಇದಕ್ಕೆ ಕಾರಣರಾದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಚಿವ ಪ್ರಲ್ಹಾದ ಜೋಶಿ ಹಾಗೂ ಕುವೆಂಪು ಹೆಸರು ಸೂಚಿಸಿದ ಡಿ.ಪಿ.ಸತೀಶ್ ಅವರಿಗೆ ಧನ್ಯವಾದ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.