ಬೆಂಗಳೂರು : ನಗರದಾದ್ಯಂತ ನಿನ್ನೆ ಸುರಿದ ಭಾರೀ ಮಳೆಗೆ ಮಂತ್ರಿಮಾಲ್ ಸಮೀಪದ ಜೆಡಿಎಸ್ ಕೇಂದ್ರ ಕಚೇರಿ ಮುಂಭಾಗದ ಮೆಟ್ರೋ ತಡೆಗೋಡೆ ಕುಸಿದಿದ್ದು, ಕಾರು, ಬೈಕ್ ಗಳು ಜಖಂಗೊಂಡಿವೆ.
ತಡೆಗೋಡೆಯ ಪಕ್ಕದಲ್ಲಿ ಕಾರು ಹಾಗೂ ಬೈಕ್ ಗಳನ್ನು ನಿಲ್ಲಿಸಲಾಗಿತ್ತು. ಆದ್ರೆ, ಮೆಟ್ರೋ ತಡೆಗೋಡೆ ಕುಸಿತದಿಂದ 6 ಕಾರುಗಳು ಹಾಗೂ ಎರಡು ಬೈಕ್ ಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಷ್ಟೆ ಅಲ್ಲದೇ ಮೆಜೆಸ್ಟಿಕ್ ಬಳಿ ಗೋಡೆ ಕುಸಿದು ಸುಮಾರು ಏಳಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದೆ. ಕಳಪೆ ಕಾಮಗಾರಿ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.
ಬಹುತೇಕ ನಗರದ ಎಲ್ಲಾ ಅಂಡರ್ ಪಾಸ್ ಗಳಲ್ಲಿ ನೀರು ತಂಬಿ ನದಿಯಂತಾಗಿವೆ. ವಿಲ್ಸನ್ ಗಾರ್ಡ್, ಶಾಂತಿನಗರ, ಶಿವಾನಂದ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಧಾರಾಕಾರ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ನಿಂತಿದೆ. ಇದರಿಂದ ವಾಹನ ಸವಾರು ಪರದಾಡುವಂತಾಗಿದೆ.