ನಾಳೆ ಸಂಭವಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ…

42
firstsuddi

ಬೆಂಗಳೂರು : ನಾಳೆ ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಸೂರ್ಯ ಗ್ರಹಣದ ಬೆನ್ನಲ್ಲೇ ಸಂಪೂರ್ಣ ಚಂದ್ರಗ್ರಹಣ ಸಂಭವಿಸ್ತಿರೋದು ಹಲವು ಮಹತ್ವ ಪಡೆದಿದೆ.

ಚಂದ್ರಗ್ರಹಣವು ಮಧ್ಯಾಹ್ನ 2.39ಕ್ಕೆ ಆರಂಭವಾಗಿ ಸಂಜೆ 6:19ಕ್ಕೆ ಮುಗಿಯಲಿದೆ. ಸೂರ್ಯಾಸ್ತ 5:54ಕ್ಕೆ ಆಗಲಿದೆ. ಗ್ರಹಣ ಸಮಯದ ವೇಳೆ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿದೆ.

ರಕ್ತ ಚಂದ್ರ ಎಂದು ಕರೆಯಲ್ಪಡುವ ಈ ಗ್ರಹಣವು, ಭೂಮಿಯ ಸೂರ್ಯಸ್ತ ಮತ್ತು ಸೂರ್ಯೋದಯ ಬೆಳಕಿನಿಂದ ಕೆಂಪು, ಕಿತ್ತಳೆ ಬಣ್ಣದಲ್ಲಿ ಕಾಣಿಸುತ್ತದೆ. ಕಳೆದ ಮೂರು ವರ್ಷದ ಹಿಂದೆ ಸಹ ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತ್ತು.

ಕಳೆದ 15 ದಿನದಲ್ಲಿ ಸಂಭವಿಸುತ್ತಿರುವ 2ನೇ ಗ್ರಹಣವಾಗಿದೆ. ಚಂದ್ರಗ್ರಹಣವು ನಾಳೆ ದೇಶ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಗೋಚರಿಸಲಿದೆ.